ಪ್ರವಾದಿ ನಿಂದನೆ ಪ್ರಕರಣದ ಕುರಿತು ಖಂಡನೆ ವ್ಯಕ್ತಪಡಿಸಿದ ಕಿಂಗ್ಡಂ ಆಫ್‌ ಜೋರ್ಡಾನ್, ಲಿಬಿಯಾ

Update: 2022-06-06 17:39 GMT

ಹೊಸದಿಲ್ಲಿ:‌ ಟಿವಿ ಚರ್ಚೆಯ ವೇಳೆ ಹಾಗೂ ಟ್ವಿಟರ್‌ ನಲ್ಲಿ ಇಬ್ಬರು ಬಿಜೆಪಿ ಮುಖಂಡರು ಪ್ರವಾದಿ ಕುರಿತಾಗಿ ನಿಂದನೆಯ ಮಾತುಗಳನ್ನಾಡಿದ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆಯೇ, ಕತರ್‌, ಕುವೈಟ್‌ ಇರಾನ್‌ ಹಾಗೂ ಇಂಡೋನೇಶ್ಯಾ ರಾಷ್ಟ್ರಗಳು ಭಾರತದ ರಾಯಭಾರಿಗೆ ಸಮನ್ಸ್‌ ನೀಡಿತ್ತು. ಸೌದಿ ಅರೇಬಿಯಾ, ಯುಎಇ ಈ ಬಗ್ಗೆ ಖಂಡನೆ ವ್ಯಕ್ತಪಡಿಸಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಕಿಂಗ್ಡಂ ಆಫ್‌ ಜೋರ್ಡಾನ್‌ ಹಾಗೂ ಲಿಬಿಯಾ ಕೂಡಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ತಮ್ಮ ಪ್ರತ್ಯೇಕ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಈ ಕುರಿತ ನಿಲುವನ್ನು ಪ್ರಕಟಿಸಿದ ಕಿಂಗ್ಡಮ್‌ ಆಫ್‌ ಜೋರ್ಡಾನ್‌ ಹಾಗೂ ಲಿಬಿಯಾ ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ, " ಭಾರತೀಯ ಜನತಾ ಪಕ್ಷದ ವಕ್ತಾರೆ ಪ್ರವಾದಿ ಮುಹಮ್ಮದ್‌ ರ ಕುರಿತು ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದನ್ನು ಬಲವಾಗಿ ಖಂಡಿಸುತ್ತದೆ" ಎಂದು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಇಬ್ಬರು ವಕ್ತಾರರನ್ನು ಬಿಜೆಪಿ ವಜಾಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News