×
Ad

ಕಾಂಬೋಡಿಯಾದಲ್ಲಿ ರಹಸ್ಯವಾಗಿ ಸೇನಾ ನೆಲೆ ಸ್ಥಾಪಿಸುತ್ತಿರುವ ಚೀನಾ: ವರದಿ

Update: 2022-06-07 19:52 IST
PHOTO CREDIT: Bloomberg

ವಾಷಿಂಗ್ಟನ್, ಜೂ.7: ಕಾಂಬೋಡಿಯಾದಲ್ಲಿ ಚೀನಾ ರಹಸ್ಯವಾಗಿ ಸೇನಾ ನೆಲೆಯನ್ನು ಸ್ಥಾಪಿಸುತ್ತಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
   ಇಂಡೊ ಪೆಸಿಫಿಕ್ ವಲಯದಲ್ಲಿ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ ಸೇನಾನೆಲೆ ಸ್ಥಾಪಿಸಿರುವ ಚೀನಾ ಇದೀಗ ಉತ್ತರ ಕಾಂಬೋಡಿಯಾದ ರೀಮ್ ಸೇನಾ ನೆಲೆಯಲ್ಲಿ ತನ್ನ 2ನೇ ಸಾಗರೋತ್ತರ ಸೇನಾ ನೆಲೆ ಸ್ಥಾಪಿಸುವ ಕಾರ್ಯದಲ್ಲಿ ತೊಡಗಿದೆ. ಈ ಸೇನಾ ವ್ಯವಸ್ಥೆಯ ಮೂಲಕ ಈ ಪ್ರದೇಶದಲ್ಲಿ ಅಮೆರಿಕದ ಸೇನಾ ಕವಾಯತಿನ ಮೇಲೆ ನಿಗಾಮ ಗುಪ್ತಚರ ನಿರ್ವಹಣೆ ಸಾಧ್ಯವಾಗಲಿದೆ . ಈ ಹೊಸ ಸೇನಾನೆಲೆಯು ಪ್ರಪಂಚದಾದ್ಯಂತ ಮಿಲಿಟರಿ ಸೌಲಭ್ಯಗಳ ಜಾಲವನ್ನು ನಿರ್ಮಿಸುವ ಮೂಲಕ ಸೂಪರ್ ಪವರ್ ದೇಶವಾಗಿ ಗುರುತಿಸಿಕೊಳ್ಳುವ ಚೀನಾದ ಉದ್ದೇಶದ ಒಂದು ಭಾಗವಾಗಿದೆ ಎಂದು ವರದಿ ಹೇಳಿದೆ.

ನೌಕಾಪಡೆಯ ಬೃಹತ್ ಹಡಗುಗಳನ್ನು ನೆಲೆಗೊಳಿಸುವ ಸಾಮರ್ಥ್ಯವನ್ನು ಹೊಂದುವುದು ಈ ಪ್ರದೇಶದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸುವ ಚೀನಾದ ಮಹಾತ್ವಾಕಾಂಕ್ಷೆಗೆ ಪೂರಕವಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಹಾಗೂ ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ. ಇಂಡೊ-ಪೆಸಿಫಿಕ್ ವಲಯ ಚೀನಾದ ಮುಖಂಡರಿಗೆ ಒಂದು ಪ್ರಮುಖ ಭಾಗವಾಗಿದೆ. ಅದು ತಮ್ಮ ನ್ಯಾಯಸಮ್ಮತ ಮತ್ತು ಐತಿಹಾಸಿಕ ಪ್ರಭಾವದ ಕ್ಷೇತ್ರವೆಂದು ಅವರು ಪರಿಗಣಿಸಿದ್ದಾರೆ. ಆ ವಲಯದಲ್ಲಿ ಚೀನಾದ ಬೆಳವಣಿಗೆ ಬಹುದ್ರುವೀಯ ಪ್ರಪಂಚದೆಡೆಗಿನ ಜಾಗತಿಕ ಪ್ರವೃತ್ತಿಯ ಭಾಗವಾಗಿದೆ ಎಂದವರು ಪ್ರತಿಪಾದಿಸುತ್ತಾರೆ ಎಂದವರು ಹೇಳಿದ್ದಾರೆ.
 ಚೀನಾವು ತನ್ನ ಸೇನಾನೆಲೆಯನ್ನು ಬಳಸುವ ಬಗ್ಗೆ ಉಭಯ ದೇಶಗಳು(ಚೀನಾ-ಕಾಂಬೋಡಿಯಾ) ರಹಸ್ಯವಾಗಿ ಒಪ್ಪಂದ ಮಾಡಿಕೊಂಡಿವೆ ಎಂದು 2019ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು. ಆದರೆ ಉಭಯ ದೇಶಗಳ ಮುಖಂಡರೂ ಈ ವರದಿಯನ್ನು ನಿರಾಕರಿಸಿದ್ದರು.ಆದರೆ ಇದೀಗನಾವು ಕಾಲಾನಂತರದಲ್ಲಿ ನೋಡಿರುವುದು ಅತ್ಯಂತ ಸ್ಥಿರವಾದ ಮತ್ತು ಸ್ಪಷ್ಟವಾದ ನಿದರ್ಶನವಾಗಿದ್ದು ಇಲ್ಲಿ ಪ್ರಮುಖ ವಿಷಯವೆಂದರೆ ಚೀನಾ ಇನ್ನೊಂದು ದೇಶದಲ್ಲಿ ಸೌಲಭ್ಯದ ಬಳಕೆ ಮತ್ತು ಏಕಪಕ್ಷೀಯ ಸೇನಾ ನೆಲೆಯನ್ನು ಹೊಂದಿರುವುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News