ಕೆಯುಡಿ ಘಟಿಕೋತ್ಸವ; ಸಸ್ಯಶಾಸ್ತ್ರದಲ್ಲಿ 5 ಚಿನ್ನ ಪಡೆದ ಮುರುಡೇಶ್ವರದ ನಮೃತಾ ಶೆಟ್ಟಿ

Update: 2022-06-09 11:58 GMT

ಭಟ್ಕಳ: ಧಾರವಾಡದಲ್ಲಿ ಬುಧವಾರ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಮುರುಡೇಶ್ವರದ ನಮೃತಾ ಶೆಟ್ಟಿ ಎಂ.ಎಸ್ಸಿ ಸಸ್ಯಶಾಸ್ತ್ರದಲ್ಲಿ 5 ಚಿನ್ನದ ಪದಕ ಪಡೆದುಕೊಂಡರು. 

ಮುರುಡೇಶ್ವರದ ಗೀತಾ ಹಾಗೂ ಉದಯ ನಾರಾಯಣ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ನಮೃತಾ ಶೆಟ್ಟಿ, ಮುರುಡೇಶ್ವರದ ಆರ್.ಎನ್.ಎಸ್ ವಿದ್ಯಾನಿಕೇತನದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವ್ಯಾಸಂಗ ಮಾಡಿದ್ದು ಹೊನ್ನಾವರದ ಎಸ್ ಡಿ ಎಮ್ ಮಹಾವಿದ್ಯಾಲಯದಲ್ಲಿ  ಬಿಎಸ್ಸಿ ಪದವಿ ಪಡೆದಿರುತ್ತಾರೆ.

ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುವ ನಮೃತಾ ಶೆಟ್ಟಿಗೆ, ತಾಲೂಕು ಗಾಣಿಗ ಸೇವಾಸಂಘದ ಪರವಾಗಿ ಶ್ರೀಧರ್ ಶೆಟ್ಟಿ   ಸುಭಾಷ್ ಶೆಟ್ಟಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ‌ ಪರಿಷತ್ ಸದಸ್ಯ ಪ್ರಕಾಶ್ ಶಿರಾಲಿ, ಗಜಾನನ ಶೆಟ್ಟಿ, ಎಂ.ಆರ್. ಮುರ್ಡೇಶ್ವರ್, ಉಪನ್ಯಾಸಕ ರಾಜೇಶ ಶೆಟ್ಟಿ, ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಶೆಟ್ಟಿ ಅಭಿನಂದಿಸಿದ್ದು ವಿದ್ಯಾರ್ಥಿನೀಯ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News