ಹೊನ್ನಾವರ ; ಮೀನುಗಾರರ ಮೇಲೆ ಪೋಲಿಸ್ ದೌರ್ಜನ್ಯ ಆರೋಪಿಸಿ ಮಾನವ ಹಕ್ಕು ಆಯೋಗಕ್ಕೆ ದೂರು

Update: 2022-06-09 12:04 GMT

ಹೊನ್ನಾವರ ; ಸರಕಾರಿ ಅಧಿಕಾರಿಗಳೇ ಕಾನೂನು ನಿಯಮಗಳನ್ನು ಉಲ್ಲಂಘಿಸಿ ಮೀನುಗಾರರ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗಿದೆ ಎಂದು ರಾಷ್ಟೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾoತ ಕೊಚರೇಕ ತಿಳಿಸಿದರು.

ಕಾಸರಕೊಡ ಟೊಂಕಾದಲ್ಲಿ ಗುರುವಾರದಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ಥಳೀಯರ ತೀವ್ರ ವಿರೋಧದ ನಡುವೆಯೂ ಅಭಿವೃದ್ಧಿ ನಿಷೇದಿತ ಕಾಸರಕೋಡ ಕಡಲತೀರದಲ್ಲಿ ಬಲವಂತದಿಂದ ಅಕ್ರಮ ರಸ್ತೆ ಕಾಮಗಾರಿ ನರ‍್ವಹಿಸಿದ ಮತ್ತು ಖಾಸಗಿ ಮೂಲದ ವಾಣಿಜ್ಯ ಬಂದರು ನಿರ್ಮಾಣ ಕಂಪನಿಯ ಆಮೀಶಗಳಿಗೆ ಒಳಗಾಗಿ ಸರಕಾರಿ ಆಡಳಿತ ಯಂತ್ರದ ದರ‍್ಬಳಕೆ ಮಾಡಿರುವುದರ ವಿರುದ್ಧ ಹಾಗೂ ಗರ್ಭಿಣಿ ಮಹಿಳೆಯರು ಸೇರಿದಂತೆ ಪ್ರತಿಭಟನಾ ನಿರತ ನಾಗರಿಕರ ಆಕ್ರಮ ಬಂಧನ ಮತ್ತು ನಾಗರಿಕರ ಮೇಲಿನ ಪೊಲೀಸ್ ದೌರ್ಜನ್ಯದ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ದೆಹಲಿಯ ಹ್ಯೂಮನ್ ರೈಟ್ ಡಿಫೆಂಡರ್ಸ್ ಅಲರ್ಟ್ -ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಹೆನ್ರಿ ಅವರು ಹೊನ್ನಾವರ ಪೊಲೀಸ್ ಅಧಿಕಾರಿಗಳ ವಿರುದ್ಧ ತುರ್ತು ಮೇಲ್ಮನವಿ ರೂಪದ ದೂರನ್ನು ದಾಖಲಿಸಿದ್ದಾರೆ. ‌

ಇನ್ನೊಂದೆಡೆ ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳ ವಿರುದ್ಧ ನಿಯಮಬಾಹಿರ ಕಾಮಗಾರಿ, ಕಾನೂನು ಉಲ್ಲಂಘನೆ, ಅಧಿಕಾರದ ದುರ್ಬಳಕೆ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಪೋಲಿಸ್ ದೌರ್ಜನ್ಯದ ವಿರುದ್ಧ ರಾಜ್ಯದ ರಾಜ್ಯಪಾಲರು ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಲಿಖಿತ ದೂರನ್ನು ಸಲ್ಲಿಸಲಾಗಿದ್ದು ಸಮಗ್ರ ಘಟನೆಯ ಕುರಿತಂತೆ ನ್ಯಾಯಾಂಗ ತನಿಖೆಗೆ ಆಗ್ರಹಪಡಿಸಿದ್ದು ಕೆಲವು ಪ್ರಮುಖ ವಿಚಾರಗಳ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳ ನೇತ್ರತ್ವದ ಸ್ವತಂತ್ರ ಸಮಿತಿಯಿಂದ ತನಿಖೆ ನಡೆಸುವಂತೆ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ರವರಿಗೆ ಲಿಖಿತ ದೂರು ಸಲ್ಲಿಸಿದೆ ಎಂದರು.

ಮೀನುಗಾರರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಗಣಪತಿ ತಾಂಡೇಲ, ಕಾರ್ಮಿಕ ಸಂಘದ ಕಾರ್ಯದರ್ಶಿ ರಾಜು ತಾಂಡೇಲ, ಭಾಸ್ಕರ್ ತಾಂಡೇಲ, ಸಂದೀಪ ತಾಂಡೇಲ, ರಮೇಶ ತಾಂಡೇಲ ಮುoತಾದ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News