×
Ad

ಉಡುಪಿ ಜಿಲ್ಲಾ ಕಾಂಗ್ರೆಸ್‌ನಿಂದ ಜೂ.15ರಂದು ನವ ಸಂಕಲ್ಪ ಚಿಂತನಾ ಶಿಬಿರ

Update: 2022-06-09 19:18 IST

ಉಡುಪಿ : ಜಿಲ್ಲಾ ಕಾಂಗ್ರೆಸ್ ಮಟ್ಟದಲ್ಲಿ ನವ ಸಂಕಲ್ಪ ಚಿಂತನ ಶಿಬಿರವನ್ನು ನಡೆಸಲು ನಿರ್ಧರಿಸ ಲಾಗಿದ್ದು, ಜೂ.೧೫ರಂದು ಉಡುಪಿ ಜಿಲ್ಲೆಯಲ್ಲೂ ಶಿಬಿರವನ್ನು ನಡೆಸುವ ಕುರಿತು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಅಶೋಕ್ ಕುಮಾರ್ ಕೊಡವೂರು ಮಾಹಿತಿ ನೀಡಿದ್ದಾರೆ. 

ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಹಾಗೂ ಮುಂಚೂಣಿ ಘಟಕಗಳ ಸಭೆಯಲ್ಲಿ ಮಾತನಾಡುತ್ತಾ ಅವರು ಈ ಬಗ್ಗೆ ವಿವರಗಳನ್ನು ನೀಡಿದರು. 

ಎಐಸಿಸಿ ಹಾಗೂ ಕೆಪಿಸಿಸಿ ಮಟ್ಟದಲ್ಲಿ ನವಸಂಕಲ್ಪ ಚಿಂತನ ಶಿಬಿರದ ಮಾದರಿಯಲ್ಲೇ ಈ ಶಿಬಿರ ನಡೆಯಲಿದ್ದು, ಪಕ್ಷದ ಬೆಳವಣಿಗೆಯ ಕುರಿತಂತೆ 10 ಅಂಶಗಳ ಕ್ರಿಯಾಯೋಜನೆಯನ್ನು ಕಾರ್ಯಗತಗೊಳಿಸುವ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

ಕೆಪಿಸಿಸಿಯಿಂದ ಉಡುಪಿ ಜಿಲ್ಲಾ ಉಸ್ತುವಾರಿಯಾಗಿ ನಿಯುಕ್ತಿಗೊಂಡಿರುವ ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ಇಂದಿನ ಸಭೆಯಲ್ಲಿ ಉಪಸ್ಥಿತ ರಿದ್ದು ಮಾತನಾಡಿ, ಭ್ರಷ್ಟಾಚಾರದಿಂದ ಗಳಿಸಿದ ಹಣದಿಂದ ಬಿಜೆಪಿ ಬಲಿಷ್ಠವಾಗಿರಬಹುದು. ಜನರನ್ನು ಹೆಚ್ಚು ಸಮಯ ಕತ್ತಲಿನಲ್ಲಿಡಲು ಸಾಧ್ಯವಿಲ್ಲ. ಬೆಳಕು ಹರಿಯುತ್ತಿರುವುದರಿಂದ ಬಿಜೆಪಿಯ ಸುಳ್ಳು, ಭ್ರಷ್ಟಾಚಾರ, ಜನರನ್ನು ವಿಭಜಿಸುವ ಕುತಂತ್ರಗಳು ಖಂಡಿತ ಜನರಿಗೆ ಅರಿವಾಗಲಿದೆ. ಬಿಜೆಪಿಯ ಆಡಳಿತದಿಂದ ಜನರು ಭ್ರಮನಿರಸಗೊಂಡಿರುವುದನ್ನು ನಾವು ಕಾಣಬಹುದು ಎಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಸುಳ್ಳಿನ ರಾಜಕೀಯ ಮಾಡುವ ಬಿಜೆಪಿಗೆ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸುವ ವಿಶ್ವಾಸ ನಮಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಚಿಂತನ ಶಿಬಿರ ದಲ್ಲಿ ಸಾಕಷ್ಟು ವಿಷಯಗಳನ್ನು ಚರ್ಚಿಸಲಾಗಿದೆ. ನಾವು ಚುನಾವಣೆಗೆ ಸಿದ್ಧರಾಗ ಬೇಕಿದೆ. ಈ ನಿಟ್ಟಿನಲ್ಲಿ ಬೂತು ಸಮಿತಿಗಳನ್ನು ರಚಿಸಿ ಪದಾಧಿಕಾರಿಗಳ ನೇಮಕ ವನ್ನು ಅಂತಿಗೊಳಿಸಬೇಕು ಎಂದರು.

ಯುವ ಕಾಂಗ್ರೆಸ್ ಮುಖಂಡ, ಉಡುಪಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಮಿಥುನ್ ರೈ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳಿಗೆ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನಹೊಂದಿದೆ ಮುಖಂಡರಾದ ಕರಂಬಳ್ಳಿ ಗೋಪಾಲ ಶೆಟ್ಟಿ, ಸುರೇಶ್ ಶೇರಿಗಾರ್, ಕಟ್ಟೆ ಭೋಜಣ್ಣ ಗಂಗೊಳ್ಳಿ, ಸಂಕಪ್ಪ ಪೂಜಾರಿ ಇವರಿಗೆ ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಬಿ. ಕುಶಲ ಶೆಟ್ಟಿ ನುಡಿನಮನ ಸಲ್ಲಿಸಿದರು.

ಸಭೆಯಲ್ಲಿ ಮಾಜಿ ಶಾಸಕ ಯು.ಆರ್.ಸಭಾಪತಿ, ಬ್ಲಾಕ್ ಅಧ್ಯಕ್ಷರಾದ ಶಂಕರ್ ಕುಂದರ್, ಮಂಜುನಾಥ ಪೂಜಾರಿ, ಹರಿಪ್ರಸಾದ್ ಶೆಟ್ಟಿ, ರಮೇಶ್ ಕಾಂಚನ್, ನವೀನ್‌ಚಂದ್ರ ಸುವರ್ಣ, ಪ್ರದೀಪ್‌ಕುಮಾರ್ ಶೆಟ್ಟಿ ವಂಡ್ಸೆ, ದಿನಕರ ಹೇರೂರು, ಸಂತೋಷ್ ಕುಲಾಲ್, ಸದಾಶಿವ ದೇವಾಡಿಗ, ಮದನ್ ಕುಮಾರ್, ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಪ್ರಸಾದ್‌ರಾಜ್ ಕಾಂಚನ್, ರಾಜು ಪೂಜಾರಿ, ಗೀತಾ ವಾಗ್ಳೆ, ಹರೀಶ್ ಕಿಣಿ, ಪ್ರಖ್ಯಾತ ಶೆಟ್ಟಿ, ಹಿರಿಯಣ್ಣ, ಭಾಸ್ಕರ ರಾವ್ ಕಿದಿಯೂರು, ನೀರೆ ಕೃಷ್ಣ ಶೆಟ್ಟಿ, ಸರಸು ಬಂಗೇರ, ರೋಶನ್ ಒಲಿವೆರಾ, ಭುಜಂಗ ಶೆಟ್ಟಿ, ಬಿಪಿನ್ ಚಂದ್ರಪಾಲ್ ನಕ್ರೆ, ಉದ್ಯಾವರ ನಾಗೇಶ್ ಕುಮಾರ್, ಶಶಿಧರ್ ಶೆಟ್ಟಿ ಎಲ್ಲೂರು, ಅಬೀಬ್ ಅಲಿ, ಕೃಷ್ಣಮೂರ್ತಿ ಆಚಾರ್ಯ, ನಿತ್ಯಾನಂದ ಶೆಟ್ಟಿ ಹಾರಾಡಿ ಮುಂತಾದವರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಬಿ.ನರಸಿಂಹ ಮೂರ್ತಿ ಸ್ವಾಗತಿಸಿ, ಅಣ್ಣಯ್ಯ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿ ಡಾ.ಸುನೀತಾ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News