ಅಕ್ರಮ ಗೋಮಾಂಸ ಸಾಗಾಟ ಆರೋಪ : ಐವರ ಸೆರೆ

Update: 2022-06-10 15:40 GMT

ಬೈಂದೂರು : ಕಾರಿನಲ್ಲಿ ಅಕ್ರಮವಾಗಿ ಗೋ ಮಾಂಸವನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಮೂವರು ಮಹಿಳೆಯರು ಸೇರಿದಂತೆ ಐವರನ್ನು ಬೈಂದೂರು ಪೊಲೀಸರು ಪಡುವರಿ ಗ್ರಾಮದ ಒತ್ತಿನೆಣೆ ಬಳಿ ಜೂ.7ರಂದು ಸಂಜೆ ವೇಳೆ ಬಂಧಿಸಿದ್ದಾರೆ.

ಮಾವಿನಕಟ್ಟೆಯ ಮುಹಮ್ಮದ್ ಅಲ್ತಾಫ್, ಮುಜಾಫರ್ ಹುಸೈನ್ ಫಕ್ರು, ಅಶ್ಫಿಯಾ, ನಿಕಾತ್, ಝರೀನಾ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ಕಾರನ್ನು  ಪರಿಶೀಲಿಸಿದಾಗ ಗೋ ಮಾಂಸದ ಪತ್ತೆಯಾಗಿದ್ದು, ಕಾರು ಮತ್ತು ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News