ವಿದ್ಯುತ್ ರೈಲ್ವೇ ಹಳಿಯಲ್ಲಿ ಸಿಕ್ಕಿಬಿದ್ದ ವ್ಯಕ್ತಿಯ ರಕ್ಷಿಸಿದ ಪ್ರಯಾಣಿಕ: ವಿಡಿಯೋ ವೈರಲ್

Update: 2022-06-10 18:26 GMT

ನ್ಯೂಯಾರ್ಕ್, ಜೂ.10: ಕರೆಂಟ್ ಹರಿಯುತ್ತಿದ್ದ ವಿದ್ಯುತ್ ರೈಲ್ವೇ ಹಳಿಯಲ್ಲಿ ಸಿಕ್ಕಿಬಿದ್ದಿದ್ದ ವ್ಯಕ್ತಿಯನ್ನು ಸಹಪ್ರಯಾಣಿಕ ಜೀವದ ಹಂಗು ತೊರೆದು ರಕ್ಷಿಸಿದ ವಿದ್ಯಮಾನ ಚಿಕಾಗೊದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸಾಹಸ ಮೆರೆದ 20 ವರ್ಷದ ಯುವಕ ಟೋನಿ ಪೆರಿ ಎಂಬಾತನನ್ನು ಬಳಿಕ ಸನ್ಮಾನಿಸಿ ಗೌರವಿಸಲಾಗಿದೆ. ಜತೆಗೆ ಸ್ಥಳೀಯ ಉದ್ಯಮಿಯೊಬ್ಬರು ಹೊಚ್ಚಹೊಸ ಆಡಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.

ಆ ವ್ಯಕ್ತಿ 600 ವೋಲ್ಟ್ ವಿದ್ಯುತ್ ಹರಿಯುತ್ತಿರುವ ಹಳಿಯ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿದ್ದ. ನನಗೆ ಆತನನ್ನು ರಕ್ಷಿಸುವ ಯೋಚನೆ ಮಾತ್ರ ತಲೆಯಲ್ಲಿದ್ದ ಕಾರಣ ಹಳಿಗೆ ಇಳಿದೆ. ಆದರೆ ವಿದ್ಯುತ್ ಹರಿಯುತ್ತಿರುವುದರಿಂದ ಆತನನ್ನು ಮುಟ್ಟದಂತೆ ಸಹಪ್ರಯಾಣಿಕರು ಕಿರುಚಿದರು. ಬಳಿಕ ಜಾಗರೂಕತೆಯಿಂದ ಆತನ ದೇಹವನ್ನು ಸ್ಪರ್ಷಿಸದೆ ಆತನನ್ನು ಹಳಿಯಿಂದ ಬೇರ್ಪಡಿಸಿದೆ ಎಂದು ಟೋನಿ ಹೇಳಿದ್ದಾನೆ. ಈತ ವ್ಯಕ್ತಿಯನ್ನು ರಕ್ಷಿಸುವ ಕಾರ್ಯಾಚರಣೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News