ತೈವಾನ್ ಸ್ವಾತಂತ್ರ್ಯ ಘೋಷಿಸಿದರೆ ಯುದ್ಧ ಆರಂಭಿಸಲು ಹಿಂಜರಿಯುವುದಿಲ್ಲ: ಅಮೆರಿಕಕ್ಕೆ ಚೀನಾದ ಸಂದೇಶ

Update: 2022-06-11 10:17 GMT
ರಕ್ಷಣಾ ಸಚಿವ ವೀ ಫೆಂಗ್ಹೆ, Photo:AFP

ಬೀಜಿಂಗ್: "ಯಾರಾದರೂ ಚೀನಾದಿಂದ ತೈವಾನ್ ಅನ್ನು  ವಿಭಜಿಸುವ ಸಾಹಸಕ್ಕೆ ಕೈ ಹಾಕಿದರೆ  ಚೀನಾದ ಸೇನೆಯು ಖಂಡಿತವಾಗಿಯೂ ಯಾವುದೇ ವೆಚ್ಚವನ್ನು ಲೆಕ್ಕಿಸದೇ ಯುದ್ಧವನ್ನು ಆರಂಭಿಸಲು ಹಿಂಜರಿಯುವುದಿಲ್ಲ" ಎಂದು ರಕ್ಷಣಾ ಸಚಿವ ವೀ ಫೆಂಗ್ಹೆಯನ್ನು ಉಲ್ಲೇಖಿಸಿ ದೇಶದ ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಸಿಂಗಾಪುರದಲ್ಲಿ ನಡೆದ ರಕ್ಷಣಾ ಶೃಂಗಸಭೆಯ ವೇಳೆ ಶುಕ್ರವಾರ ಅಮೆರಿಕದ ಸಹವರ್ತಿ ಲಾಯ್ಡ್ ಆಸ್ಟಿನ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ವೀ ಈ ಹೇಳಿಕೆಗಳನ್ನು ನೀಡಿದ್ದರು. AFP ಪ್ರಕಾರ ಇದು ಅವರ ಮೊದಲ ಮುಖಾಮುಖಿ ಭೇಟಿಯಾಗಿದೆ.

ತೈವಾನ್ ಸ್ವ-ಆಡಳಿತ ಪ್ರದೇಶವಾಗಿದ್ದು, ಚೀನಾದ ಮುಖ್ಯ ಭೂಭಾಗದೊಂದಿಗೆ ಏಕೀಕರಿಸುವ ಪ್ರಾಂತ್ಯವಾಗಿ ಬೀಜಿಂಗ್  ನೋಡುತ್ತದೆ. ಮತ್ತೊಂದೆಡೆ, ಎರಡು ದೇಶಗಳು ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲದಿದ್ದರೂ ಕೂಡ  ಅಮೆರಿಕವು ತೈವಾನ್‌ನ ಪ್ರಮುಖ ಅಂತರರಾಷ್ಟ್ರೀಯ ಬೆಂಬಲಿಗ ಹಾಗೂ  ಶಸ್ತ್ರಾಸ್ತ್ರ ಪೂರೈಕೆದಾರನಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News