ದಂಡ ವಿಧಿಸಿದ ಪೊಲೀಸರ ಮೇಲಿನ ಕೋಪದಲ್ಲಿ ಠಾಣೆಯ ವಿದ್ಯುತ್‌ ಸಂಪರ್ಕವನ್ನೇ ಕಡಿತಗೊಳಿಸಿದ ಲೈನ್‌ಮ್ಯಾನ್

Update: 2022-06-13 10:31 GMT
ಸಾಂದರ್ಭಿಕ ಚಿತ್ರ - ಪಿಟಿಐ

ಬರೇಲಿ: ತನ್ನ ಬೈಕ್‌ಗೆ ಪೊಲೀಸರು ದಂಡ ಹಾಕಿದ ಕೋಪದಲ್ಲಿ ಲೈನ್‌ ಮ್ಯಾನ್‌ ಒಬ್ಬ ಪೊಲೀಸ್‌ ಠಾಣೆಯ ವಿದ್ಯುತ್‌ ಸಂಪರ್ಕವನ್ನೇ ಕಡಿತಗೊಳಿಸಿದ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಬರೇಲಿಯ ಹರ್ದಾಸ್‌ಪುರ ಪೊಲೀಸ್ ಠಾಣೆಯ ವಿದ್ಯುತ್‌ ಸಂಪರ್ಕ ಕಡಿತಗೊಂಡ ಪೊಲೀಸ್‌ ಠಾಣೆ. ಶನಿವಾರ ರಾತ್ರಿಯೇ ಪೊಲೀಸ್ ಠಾಣೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ವರದಿಯಾಗಿದೆ.

ಘಟನೆಯ ಬಗ್ಗೆ ವಿದ್ಯುತ್ ಅಧಿಕಾರಿಗಳು ಈಗಾಗಲೇ ತನಿಖೆ ಆರಂಭಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ.

ಮೂಲಗಳ ಪ್ರಕಾರ, ಪೊಲೀಸ್ ಅಧಿಕಾರಿ ಮೋದಿ ಸಿಂಗ್ ಅವರು ವಾಹನ ತಪಾಸಣೆ ನಡೆಸುತ್ತಿದ್ದಾಗ ಲೈನ್‌ಮ್ಯಾನ್ ಭಗವಾನ್ ಸ್ವರೂಪ್ ಅವರ ಬೈಕ್ ನಿಲ್ಲಿಸಿ ಅಗತ್ಯ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದ್ದರು. ಸ್ವರೂಪ್ ತನ್ನ ಬಳಿ ಕಾಗದಪತ್ರಗಳಿಲ್ಲ ಮತ್ತು ಮನೆಗೆ ಹೋಗಿ ಅವುಗಳನ್ನು ತರಬೇಕು ಎಂದು ಮನವಿ ಮಾಡಿಕೊಂಡಿದ್ದಾನೆ. ಆದರೆ, ಅದನ್ನು ನಿರ್ಲಕ್ಷಿಸಿ ಇನ್ಸ್‌ಪೆಕ್ಟರ್ ರೂ 500 ದಂಡವನ್ನು ಆತನಿಗೆ ವಿಧಿಸಿದ್ದಾರೆ ಎಂದು ಐಎಎನ್‌ಎಸ್ ವರದಿ ಮಾಡಿದೆ.

ಈ ಘಟನೆಯಿಂದ ಸ್ವರೂಪ್ ಕೋಪಗೊಂಡಿದ್ದು, ಇಂಧನ ಇಲಾಖೆಯ ತನ್ನ ಸಹೋದ್ಯೋಗಿಗಳನ್ನು ಸಂಪರ್ಕಿಸಿ ಪೊಲೀಸ್ ಠಾಣೆಯ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದ್ದಾರೆ. ಪೊಲೀಸ್ ಠಾಣೆಯ ವಿದ್ಯುತ್ ಮೀಟರ್ ನಲ್ಲಿ ಸಮಸ್ಯೆಯಿದೆ ಎಂದು ಸ್ವರೂಪ್ ಸುದ್ದಿಗಾರರಿಗೆ ತಿಳಿಸಿರುವುದಾಗಿ timesnownews ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News