ನಮ್ಮನ್ನು ಬೆದರಿಕೆ ಎಂದು ಪರಿಗಣಿಸುವುದು ಐತಿಹಾಸಿಕ ಪ್ರಮಾದವಾಗಲಿದೆ ಎಂದ ಚೀನಾ

Update: 2022-06-12 18:30 GMT

ಸಿಂಗಾಪುರ, ಜೂ.12: ಚೀನಾವನ್ನು ಬೆದರಿಕೆ, ಎದುರಾಳಿ ಅಥವಾ ಶತ್ರು ಎಂದು ಪರಿಗಣಿಸುವಂತೆ ಒತ್ತಾಯಿಸುವುದು ಐತಿಹಾಸಿಕ ಮತ್ತು ಕಾರ್ಯತಂತ್ರದ ಪ್ರಮಾದವಾಗಲಿದೆ ಎಂದು ಚೀನಾದ ರಕ್ಷಣಾ ಸಚಿವ ಜನರಲ್ ವೆಯ್ ಫೆಂಗೆ ರವಿವಾರ ಹೇಳಿದ್ದಾರೆ.

ಚೀನಾ-ಅಮೆರಿಕ ಸಂಬಂಧವು ನಿರ್ಣಾಯಕ ಮತ್ತು ನಿರ್ಧಾರಕ ಘಟ್ಟದಲ್ಲಿದೆ ಎಂದವರು ಹೇಳಿದ್ದಾರೆ. ಸಿಂಗಾಪುರದಲ್ಲಿ ನಡೆದ ಶಾಂಗ್ರಿ-ಲಾ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಚೀನಾ-ಅಮೆರಿಕ ಸಹಕಾರ ಸಂಬಂಧವು ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗೆ ಅತ್ಯಗತ್ಯವಾಗಿದೆ. ಸಂಘರ್ಷದಿಂದ ಉಭಯ ದೇಶಗಳಿಗೆ ಅಥವಾ ಇತರ ದೇಶಗಳಿಗೆ ಯಾವುದೇ ಪ್ರಯೋಜನವಾಗದು.

ಚೀನಾದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸದಂತೆ ಮತ್ತು ಅದರ ಹಿತಾಸಕ್ತಿಗೆ ಘಾಸಿ ತರದಂತೆ ಅಮೆರಿಕನ್ನು ಆಗ್ರಹಿಸುತ್ತಿದ್ದೇವೆ. ಅಮೆರಿಕ ಹೀಗೆ ಮಾಡದಿದ್ದರೆ ದ್ವಿಪಕ್ಷೀಯ ಸಂಬಂಧ ಸುಧಾರಣೆಯಾಗಲಿದೆ. ಸ್ಥಿರ ಸಂಬಂಧವು ಉಭಯ ದೇಶಗಳ ಮತ್ತು ಪ್ರಪಂಚದ  ಹಿತಾಸಕ್ತಿಗೂ ಪೂರಕವಾಗಲಿದೆ. ಸಂಘರ್ಷದಿಂದ ಯಾರಿಗೂ ಪ್ರಯೋಜನವಿಲ್ಲ. ದ್ವಿಪಕ್ಷೀಯ ಸಂಬAಧವನ್ನು  ವ್ಯಾಖ್ಯಾನಿಸಲು ಪೈಪೋಟಿಯನ್ನು ಬಳಸುವುದಕ್ಕೆ ಚೀನಾದ ವಿರೋಧವಿದೆ ಎಂದವರು  ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News