ಬ್ರಿಟನ್ ರಾಣಿ ಎಲಿಝಬೆತ್ ದಾಖಲೆ

Update: 2022-06-12 18:33 GMT

ಲಂಡನ್, ಜೂ.12: ಬ್ರಿಟನ್‌ನ ರಾಣಿ ಎರಡನೇ ಎಲಿಝಬೆತ್ ವಿಶ್ವದಲ್ಲಿ ಅತ್ಯಧಿಕ ಅವಧಿಗೆ ರಾಜಮನೆತನದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ.

ಫ್ರಾನ್ಸ್ನ 14ನೆಯ ಲೂಯಿಸ್ 72 ವರ್ಷ 110 ದಿನ ದೊರೆಯ ಹುದ್ದೆ ನಿರ್ವಹಿಸಿದ ವಿಶ್ವದಲ್ಲಿ ಅತ್ಯಧಿಕ ಅವಧಿಗೆ ದೊರೆಯಾಗಿ  ಚರಿತ್ರೆಯಲ್ಲಿ ಸ್ಥಾನ ಪಡೆದಿದ್ದಾರೆ. ಆ ಬಳಿಕದ ಸ್ಥಾನವನ್ನು 96 ವರ್ಷದ  ಬ್ರಿಟನ್ ರಾಣಿ ಪಡೆದಿದ್ದಾರೆ. ಅವರು ಕಳೆದ 70 ವರ್ಷಗಳಿಂದ ಬ್ರಿಟನ್‌ನ ರಾಣಿಯಾಗಿದ್ದಾರೆ.

ಇದರೊಂದಿಗೆ ಥೈಲ್ಯಾಂಡ್‌ನ ದೊರೆ ಭೂಮಿಬೋಲ್ ಅಡುಲ್‌ಯಡೆಜ್ ಅವರ ದಾಖಲೆಯನ್ನು ಮುರಿದಿದ್ದಾರೆ. 1953ರಲ್ಲಿ ರಾಣಿ ಪಟ್ಟಕ್ಕೇರಿದ್ದ ಎಲಿಝಬೆತ್ 2015ರಲ್ಲಿ ಬ್ರಿಟನ್‌ನ ಸುದೀರ್ಘಾವಧಿಯ ರಾಣಿಯಾಗಿ ದಾಖಲೆ ಬರೆದಿದ್ದು ತನ್ನ ಮುತ್ತಜ್ಜಿ ವಿಕ್ಟೋರಿಯಾ ರಾಣಿಯ ದಾಖಲೆಯನ್ನು ಅಳಿಸಿಹಾಕಿದ್ದರು. ಕಳೆದ ವಾರ ಎಲಿಝಬೆತ್ ಅವರು ರಾಣಿ ಹುದ್ದೆಗೇರಿದ 70ನೇ ವರ್ಷಾಚರಣೆಯನ್ನು ಬ್ರಿಟನ್‌ನಲ್ಲಿ ಸಂಭ್ರಮದಿAದ ಆಚರಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News