×
Ad

ರಶ್ಯದಿಂದ 3 ಲಕ್ಷ ಟನ್‌ಗಳಷ್ಟು ಧಾನ್ಯ ನಾಶ: ಉಕ್ರೇನ್

Update: 2022-06-13 00:04 IST

ಕೀವ್, ಜೂ.12: ಉಕ್ರೇನ್‌ನ ಗೋದಾಮುಗಳಲ್ಲಿ ದಾಸ್ತಾನಿರಿಸಿದ್ದ ಸುಮಾರು 3 ಲಕ್ಷ ಟನ್‌ಗಳಷ್ಟು ಧಾನ್ಯಗಳು ಕಳೆದ ವಾರಾಂತ್ಯ ರಶ್ಯ ನಡೆಸಿದ ವಾಯುದಾಳಿಯಲ್ಲಿ ನಾಶವಾಗಿರಬಹುದು ಎಂದು ಉಕ್ರೇನ್‌ನ ಸಹಾಯಕ ಕೃಷಿ ಸಚಿವ ತರಾಸ್ ವಿಸೊಟ್‌ಸ್ಕಿ ಶನಿವಾರ ಹೇಳಿದ್ದಾರೆ.

ದಾಖಲೆಗಳ ಪ್ರಕಾರ, ಫೆ.24ರಂದು ಯುದ್ಧ ಆರಂಭಗೊAಡ ಸಂದರ್ಭ ಕಪ್ಪು ಸಮುದ್ರದ ಬಂದರು ಮಿಕೊಲೈವ್‌ನ ದಾಸ್ತಾನು ಕೇಂದ್ರದಲ್ಲಿ ಸುಮಾರು 3 ಲಕ್ಷ ಟನ್‌ಗಳಷ್ಟು ಧಾನ್ಯಗಳಿದ್ದವು. ಬಹುತೇಕ ಗೋಧಿ ಮತ್ತು ಜೋಳವನ್ನು ಇಲ್ಲಿ ಸಂಗ್ರಹಿಸಿಡಲಾಗಿತ್ತು. ಆದರೆ ಇವು ರಶ್ಯದ ವಾಯುದಾಳಿಗೆ ಸಿಲುಕಿ ನಾಶವಾಗಿರುವ ಸಾಧ್ಯತೆಯಿದೆ ಎಂದು ರಾಷ್ಟಿçÃಯ ಟಿವಿ ವಾಹಿನಿಯಲ್ಲಿ ಸಚಿವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News