ವಡೋದರಾದಿಂದ ಮುಂಬೈಗೆ ಜೀವಂತ ಹೃದಯ ಸಾಗಾಟ !
Update: 2022-06-13 21:17 IST
ಹೊಸದಿಲ್ಲಿ,ಜೂ.13: ಇಂಡಿಗೋ ಏರ್‌ಲೈನ್ಸ್ ನ ತಂಡವು ಕಳೆದ ವಾರ ಮಿದುಳು ಸಾವಿಗೀಡಾಗಿದ್ದ ರೋಗಿಯಿಂದ ಪಡೆಯಲಾಗಿದ್ದ ಜೀವಂತ ಹೃದಯವನ್ನು ವಡೋದರಾದಿಂದ ಮುಂಬೈಗೆ 2 ಗಂಟೆ 22 ನಿಮಿಷಗಳಲ್ಲಿ ಸಾಗಿಸುವ ಮೂಲಕ ಜೀವವೊಂದನ್ನು ಉಳಿಸುವಲ್ಲಿ ನೆರವಾಗಿದೆ.
ಮುಂಬೈನ ಪರೇಲ್‌ನ ಗ್ಲೋಬಲ್ ಹಾಸ್ಪಿಟಲ್ಸ್‌ನ ವೈದ್ಯರ ತಂಡವು ವಡೋದರಾದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಪಡೆದುಕೊಂಡಿದ್ದ ದಾನಿಯ ಹೃದಯವನ್ನು ಮುಂಬೈನಲ್ಲಿ ಹೃದಯರೋಗಿಯೋರ್ವರಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ.
ಜೀವವೊಂದನ್ನು ಉಳಿಸುವ ತನ್ನ ಪ್ರಯತ್ನದಲ್ಲಿ ನೆರವಾಗಿದ್ದಕ್ಕಾಗಿ ಇಂಡಿಗೋ ಏರ್‌ಲೈನ್ಸ್ ವಡೋದರಾ ಮತ್ತು ಮುಂಬೈ ವಿಮಾನ ನಿಲ್ದಾಣಗಳಲ್ಲಿಯ ತನ್ನ ಸಿಬ್ಬಂದಿಗಳು ಮತ್ತು ವಿಮಾನದ ಸಿಬ್ಬಂದಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದೆ.
ಕಳೆದ ತಿಂಗಳು ಪುಣೆಯಿಂದ ಹೈದರಾಬಾದ್‌ಗೆ ಜೋಡಿ ಶ್ವಾಸಕೋಶಗಳನ್ನು ಯಶಸ್ವಿಯಾಗಿ ಸಾಗಿಸಲೂ ಇಂಡಿಗೋ ಏರ್‌ಲೈನ್ಸ್ ನೆರವಾಗಿತ್ತು ಎಂದು ಕಂಪನಿಯ ಸಿಇಒ ತಿಳಿಸಿದ್ದಾರೆ.