ಎಂ.ಎಸ್ಸಿ ಭೌತಶಾಸ್ತ್ರದಲ್ಲಿ 2 ಚಿನ್ನ ಪಡೆದ ಶಹನಾ ಸೈಯ್ಯದ್ ಗೆ ವಿವಿಧ ಸಂಘಟನೆಗಳಿಂದ ಸನ್ಮಾನ

Update: 2022-06-13 17:24 GMT

ಕಾರವಾರ:  ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಎಂ.ಎಸ್ಸಿ ಭೌತಶಾಸ್ತ್ರ ವಿಷಯದಲ್ಲಿ 2 ಬಂಗಾರದ ಪದಕ ಪಡೆದ ಕಾಜುಬಾಗ ನಿವಾಸಿ ಶಹಾನಾ ಸೈಯ್ಯದ್ ಗೆ ಕಾರವಾರದ ವಿವಿಧ ಮುಸ್ಲಿಮ್ ಸಂಘಟನೆಗಳು ಸನ್ಮಾಸಿ ಗೌರವಿಸಿದವು. 

ಜಮಾಅತೆ ಇಸ್ಲಾಮಿ ಹಿಂದ್ ಕಾರವಾರ ವರ್ತುಲ, ರಾಬಿತಾ ಮಿಲ್ಲತ್ ಉತ್ತರ ಕನ್ನಡ ಜಿಲ್ಲೆ, ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಕರ್ನಾಟಕ, ಆಝಾದ್ ಯುತ್ ಕ್ಲಬ್ ಕಾರವಾರ, ಎಸ್.ಐ.ಓ, ಜಿ.ಐ.ಓ ಸಂಘಟನೆಗಳ ಮುಖಂಡರು ಅವರ ಮನೆಗೆ ತೆರಳಿ ಸನ್ಮಾಸಿ ಗೌರವಿಸಿದರು. 

ಕಾರವಾರ ಕೋರ್ಟ್ ಸಿಬ್ಬಂದಿಯಾಗಿರುವ ಅಬ್ದುಲ್ ಶುಕೂರು ಸೈಯ್ಯದ್ ಹಾಗೂ ಮುಮ್ತಾಝ್ ಸೈಯ್ಯದ್ ದಂಪತಿಗಳ ಪುತ್ರಿಯಾಗಿರುವ ಶಹಾನಾ ಸೈಯ್ಯದ್ ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಭವಿಷ್ಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿದ್ದು ತನ್ನದೇ ಆದ ವಿದ್ಯಾ ಸಂಸ್ಥೆಯೊಂದನ್ನು ಹುಟ್ಟುಹಾಕಿ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರಕಿಸಿ ಕೊಡುವಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್ ಉತ್ತರಕನ್ನಡ ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪಾ, ಉತ್ತಮ ಪ್ರತಿಭೆಯನ್ನು ಹೊಂದಿರುವ ಶಹಾನಾ ಸೈಯ್ಯದ್ ತನ್ನ ಗುರಿಸಾಧಿಸುವಲ್ಲಿ ಯಶಸ್ವಿಯಾ ಗಲಿ ಎಂದು ಹಾರೈಸಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಖಲೀಲ್ ಸಾಹೇಬ್, ಆಪ್ಟೆಕ್ ಮಂಸೂರ್, ಅತಾವುಲ್ಲಾ, ಆಝಾದ್ ಯುತ್ ಕ್ಲಬ್ ನ ನಝೀರ್ ಶೇಖ್, ಐಟಾ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಮತ್ತಿತರರು ಉಪಸ್ಥಿತರಿದ್ದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News