×
Ad

2ನೇ ದಿನದ ವಿಚಾರಣೆಗೆ ಈಡಿ ಕಚೇರಿಗೆ ತೆರಳಿದ ರಾಹುಲ್ ಗಾಂಧಿ, ಕಾರ್ಯಕರ್ತರಿಂದ ಮುಂದುವರಿದ ಪ್ರತಿಭಟನೆ

Update: 2022-06-14 11:21 IST
Photo:PTI

ಹೊಸದಿಲ್ಲಿ: ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಎರಡನೇ ದಿನದ ವಿಚಾರಣೆಗಾಗಿ ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ ಅವರು ಮಂಗಳವಾರ  ಈಡಿ ಕಚೇರಿಗೆ ಆಗಮಿಸಿದ್ದಾರೆ. ಸತತ ಎರಡನೇ ದಿನವೂ ಕೇಂದ್ರ ಸರಕಾರದ ಸೇಡಿನ ರಾಜಕೀಯದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ದಿಲ್ಲಿಯ ಈಡಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು. ಪೊಲೀಸರು ಕಾಂಗ್ರೆಸ್ ನಾಯಕರು, ಕಾರ್ಯಕರ್ತರನ್ನು ಎಳೆದೊಯ್ದು ಬಸ್ಸಿನೊಳಗೆ ತುಂಬಿದ್ದಾರೆ.

ಪಕ್ಷದ ಸದಸ್ಯರ ಬೆಂಬಲ,  ಘೋಷಣೆಗಳ ನಡುವೆ ರಾಹುಲ್ ಅವರು ಸಹೋದರಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ದಿಲ್ಲಿಯ ಕಾಂಗ್ರೆಸ್ ಪಕ್ಷದ ಕಚೇರಿಗೆ ತಲುಪಿದರು.

  ನಿನ್ನೆ ಪೊಲೀಸರಿಂದ ಹಲ್ಲೆಗೊಳಗಾದ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವು ಹಿರಿಯ ನಾಯಕರು ಕೂಡ ಪಕ್ಷದ ಕಚೇರಿಯಲ್ಲಿ ರಾಹುಲ್  ಗಾಂಧಿಯವರೊಂದಿಗೆ ಇದ್ದರು.

ದಿಲ್ಲಿಯ ಕಾಂಗ್ರೆಸ್‌ನ ಮುಖ್ಯ ಕಚೇರಿಯ ಸುತ್ತಲೂ ಪೊಲೀಸರು ಹಾಗೂ  ಅರೆಸೇನಾ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಕಾಂಗ್ರೆಸ್ ಕಚೇರಿ ಇರುವ ಅಕ್ಬರ್ ರಸ್ತೆಯ ಕಡೆಗೆ ವಾಹನ ಚಲಿಸದಂತೆ  ಹಲವಾರು ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News