×
Ad

ಭಟ್ಕಳದಲ್ಲಿ ಹುಚ್ಚು ನಾಯಿ ದಾಳಿ; ನಾಲ್ವರಿಗೆ ಗಾಯ

Update: 2022-06-14 22:53 IST

ಭಟ್ಕಳ: ಇಲ್ಲಿನ ಹಳೆ ಬಸ್ ನಿಲ್ದಾಣದ ಬಳಿಯ ಮೀನು ಮತ್ತು ತರಕಾರಿ ಮಾರುಕಟ್ಟೆಯ ಹೊರಭಾಗದಲ್ಲಿ ಹುಚ್ಚು ನಾಯಿಯೊಂದು ದಾಳಿ ಮಾಡಿ ನಾಲ್ಕು ಮಂದಿಯನ್ನು ಗಾಯಗೊಳಿಸಿದ ಘಟನೆ ಮಂಗಳವಾರ ನಡೆದಿದೆ.

ನಾಯಿ ದಾಳಿಗೊಳಗಾದವರನ್ನು ಕರಿಕಾಲ್ ನಿವಾಸಿ ಮಾದೇವ ಮೊಗೇರ್ (65), ಸಿದ್ದೀಕ್ ಸ್ಟ್ರೀಟ್‍ನ ಮುಹಮ್ಮದ್ ಯಾಸೀನ್ (42), ಮೌಲ್ವಿ ಅಬುಲ್ ಹಸನ್ ನದ್ವಿ (21) ಮತ್ತು ಹನೀಫಾಬಾದ್‍ನ ಮೌಲ್ವಿ ಇಸ್ಮಾಯಿಲ್ ನದ್ವಿ (29) ಎಂದು ಗುರುತಿಸಲಾಗಿದೆ.

ಹುಚ್ಚು ನಾಯಿಯೊಂದರ ಅಟ್ಟಹಾಸ ಮಿತಿಮೀರುವ ಮುಂಚೆಯೇ ಭಟ್ಕಳ ಪುರಸಭೆಯ ಸಿಬ್ಬಂಧಿಗಳು ಹುಚ್ಚು ನಾಯಿಯನ್ನು ಹಿಡಿದು ಮುಂದಾಗುವ ಅನಾಹುತವನ್ನು ತಡೆದಿದಿದ್ದಾರೆ.  

ನಾಯಿ ದಾಳಿಯಿಂದಾಗಿ ಗಾಯಗೊಂಡವರನ್ನು ಇಲ್ಲಿನ ಸಮಾಜಸೇವಕ ಹಾಗೂ ಭಟ್ಕಳ ಮುಸ್ಲಿಂ ಯುತ್ ಫೆಡರೇಶನ್ ಮಾಜಿ ಪ್ರಧಾನ ಕಾರ್ಯದರ್ಶಿ ಸರಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಎಲ್ಲಾ ಗಾಯಾಳುಗಳಿಗೆ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಅಗತ್ಯ ಚುಚ್ಚುಮದ್ದು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News