ಸೌದಿ ಅರೆಬಿಯಾ: ಸ್ಥಳೀಯವಲ್ಲದ ಅರೆಬಿಕ್ ಭಾಷಿಕರಿಗೆ ಪ್ರಮಾಣಿತ ಪರೀಕ್ಷೆ

Update: 2022-06-14 18:18 GMT
PHOTO CREDIT: Silvia Razgova / The National

ರಿಯಾದ್, ಜೂ.14: ಸ್ಥಳೀಯವಲ್ಲದ ಅರೆಬಿಕ್ ಭಾಷಿಕರಿಗೆ ಪ್ರಮಾಣಿತ ಪರೀಕ್ಷೆ ನಡೆಸುವ ಪ್ರಕ್ರಿಯೆಗೆ ಸೌದಿ ಅರೆಬಿಯಾ ಚಾಲನೆ ನೀಡಿದ್ದು ಇದರಿಂದ ಅದರ ಬಳಕೆಯನ್ನು ಬೆಂಬಲಿಸಿ ಮತ್ತು ಪ್ರೋತ್ಸಾಹಿಸುವ ಮೂಲಕ ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಅರೆಬಿಕ್ ಭಾಷೆಯ ಪಾತ್ರವನ್ನು ಬಲಪಡಿಸಲು ಸಾಧ್ಯವಾಗಲಿದೆ ಎಂದು ಮೂಲಗಳು ಹೇಳಿವೆ.

 ಇದು ಅರೆಬಿಕ್ ಭಾಷೆಗೆ ಸೇವೆ ಸಲ್ಲಿಸುವಲ್ಲಿ ಮತ್ತು ಅದರ ಸ್ಥಾನಮಾನವನ್ನು ಹೆಚ್ಚಿಸುವಲ್ಲಿ ಸೌದಿ ಅರೆಬಿಯಾ ನಿರ್ವಹಿಸುತ್ತಿರುವ ಪ್ರಮುಖ ಪಾತ್ರದ ವಿಸ್ತರಣೆಯಾಗಿದೆ ಎಂದು ಸೌದಿಯ ಸಂಸ್ಕೃತಿ ಇಲಾಖೆಯ ಸಚಿವ ಯುವರಾಜ ಬದ್ರ್ ಬಿನ್ ಅಬ್ದುಲ್ಲಾ ಬಿನ್ ಫರ್ಹಾನ್ ಹೇಳಿದ್ದಾರೆ. ಸಂಸ್ಕೃತಿ ಸಚಿವಾಲಯ ಹಾಗೂ ಸೌದಿ ಅರೆಬಿಯಾದ ಶಿಕ್ಷಣ ಮತ್ತು ತರಬೇತಿ ಮೌಲ್ಯಮಾಪನ ಆಯೋಗದ ಜಂಟಿ ಉಪಕ್ರಮ ಇದಾಗಿದೆ ಎಂದವರು ಹೇಳಿದ್ದಾರೆ.

ಈ ಪರೀಕ್ಷೆಯನ್ನು ಸೌದಿ ಅರೆಬಿಯಾದಲ್ಲಿ ಸ್ಥಳೀಯರಲ್ಲದ ವಿದ್ಯಾರ್ಥಿಗಳಿಗೆ, ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ವಿವಿಗಳು ಮತ್ತು ಸ್ಥಳೀಯರಲ್ಲದ ಅರೆಬಿಕ್ ಭಾಷಿಕರನ್ನು ನೇಮಿಸಿಕೊಳ್ಳುವ ಸಂಸ್ಥೆಗಳು ಭಾಷೆಯಲ್ಲಿ ಸಾಮರ್ಥ್ಯ ಮತ್ತು ಅರ್ಹತೆಯನ್ನು ಹೆಚ್ಚಿಸಲು ನೆರವಾಗುವ ಉದ್ದೇಶದಿಂದ ನಡೆಸಲಾಗುವುದು ಎಂದು ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News