×
Ad

ಉತ್ತರ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ; ತಾಲೂಕು ಘಟಕಗಳಿಗೆ ಪದಾಧಿಕಾರಿಗಳ ಆಯ್ಕೆ

Update: 2022-06-16 22:18 IST

ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶಿರಸಿ ಇದರ ತಾಲೂಕಾ ಘಟಕಗಳಿಗೆ ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಪದಾಧಿಕಾರಿಗಳ ಆಯ್ಕೆ ಜೂನ್ 14ರಂದು  ಪೂರ್ಣಗೊಂಡಿದೆ. ೨೦೦೨-೨೫ನೇ ಸಾಲಿನ ಆಯಾ ತಾಲೂಕಾ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಯಾದಿಯನ್ನು ಜಿಲ್ಲಾಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಪ್ರಕಟಿಸಿದ್ದಾರೆ.

ಶಿರಸಿ ತಾಲೂಕಿಗೆ ಅಧ್ಯಕ್ಷರಾಗಿ  ಲೋಕಧ್ವನಿ ವರದಿಗಾರ ಸಂದೇಶ ಭಟ್  ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಕರ್ನಾಟಕ ವರದಿಗಾರ ಕೃಷ್ಣಮೂರ್ತಿ ಕೆರೆಗದ್ದೆ  ಆಯ್ಕೆಯಾಗಿದ್ದಾರೆ.

ಸಿದ್ದಾಪುರ ತಾಲೂಕಿಗೆ ಅಧ್ಯಕ್ಷರಾಗಿ ಉದಯವಾಣಿ ವರದಿಗಾರ ಗಂಗಾಧರ ಕೊಳಗಿ  ಪ್ರಧಾನ ಕಾರ್ಯದರ್ಶಿ ಯಾಗಿ ವಿಜಯವಾಣಿ ವರದಿಗಾರ ರಮೇಶ ಹೆಗಡೆ ಹಾರ್ಸಿಮನೆ ಆಯ್ಕೆಯಾಗಿದ್ದಾರೆ.

ಯಲ್ಲಾಪುರ ತಾಲೂಕಿಗೆ ಅಧ್ಯಕ್ಷರಾಗಿ ಲೋಕಧ್ವನಿ ವರದಿಗಾರ ಕೆ.ಎಸ್.ಭಟ್ ಆನಗೋಡ, ಪ್ರಧಾನ ಕಾರ್ಯದರ್ಶಿಯಾಗಿ ವಿಜಯವಾಣಿ ವರದಿಗಾರ ಶ್ರೀಧರ ಅಣಲಗಾರ  ಆಯ್ಕೆಯಾಗಿದ್ದಾರೆ.

ಮುಂಡಗೋಡ ತಾಲೂಕಿಗೆ ಅಧ್ಯಕ್ಷರಾಗಿ ಪ್ರಜಾವಾಣಿ ವರದಿಗಾರ ಶಾಂತೇಶಕುಮಾರ ಬೆನಕನಕೊಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಹೊಸ ದಿಗಂತ ವರದಿಗಾರ ಸಂತೋಷ ರಾಯ್ಕರ ಆಯ್ಕೆಯಾಗಿದ್ದಾರೆ.

ಜೊಯಿಡಾ ತಾಲೂಕಿಗೆ ಅಧ್ಯಕ್ಷರಾಗಿ ಉದಯವಾಣಿ ವರದಿಗಾರ ಸಂದೇಶ ದೇಸಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಕನ್ನಡ ಕನ್ನಡ ಜನಾಂತರಂಗ  ವರದಿಗಾರ ತಿಲಕರಾಜ್ ಗಾಂವ್ಕರ್ ಆಯ್ಕೆಯಾಗಿದ್ದಾರೆ.

ಹಳಿಯಾಳ ತಾಲೂಕಿನ ಅಧ್ಯಕ್ಷರಾಗಿ ಪ್ರಜಾವಾಣಿ ವರದಿಗಾರ ಸಂತೋಷ ಹಬ್ಬು, ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಕರ್ನಾಟಕ ವರದಿಗಾರ ಮಂಜುನಾಥ ಶೇರಖಾನೆ ಆಯ್ಕೆಯಾಗಿದ್ದಾರೆ.

ಕುಮಟಾ ತಾಲೂಕಿನ ಅಧ್ಯಕ್ಷರಾಗಿ ಬಿ ಟಿವಿ ವರದಿಗಾರ ಪ್ರವೀಣ್ ಹೆಗಡೆ, ಪ್ರಧಾನ ಕಾರ್ಯದರ್ಶಿಯಾಗಿ ನೂತನ ಟಿವಿ ವರದಿಗಾರ - ಮಂಜುನಾಥ ಈರಗೊಪ್ಪ ಆಯ್ಕೆಯಾಗಿದ್ದಾರೆ.

ಹೊನ್ನಾವರ ತಾಲೂಕಿನ ಅಧ್ಯಕ್ಷರಾಗಿ ವಿಶ್ವವಾಣಿ ವರದಿಗಾರ ಗೋಪಾಲಕೃಷ್ಣ ಭಟ್, ಪ್ರಧಾನ ಕಾರ್ಯದರ್ಶಿಯಾಗಿ ನೂತನ ಟಿವಿ ವರದಿಗಾರ ನಾಗರಾಜ ನಾಯ್ಕ ಆಯ್ಕೆಯಾಗಿದ್ದಾರೆ.

ಭಟ್ಕಳ ತಾಲೂಕಿನ ಅಧ್ಯಕ್ಷರಾಗಿ  ವಾರ್ತಾಭಾರತಿ ವರದಿಗಾರ ಎಂ. ಆರ್. ಮಾನ್ವಿ,  ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಮಂಜುನಾಥ ಟಿವಿ ವರದಿಗಾರ ಶೈಲೇಶ್ ವೈದ್ಯ ಆಯ್ಕೆಯಾಗಿದ್ದಾರೆ.

ಅಂಕೋಲಾ ತಾಲೂಕಿನ ಅಧ್ಯಕ್ಷರಾಗಿ- ಉದಯವಾಣಿ ವರದಿಗಾರ ಅರುಣ ಶೆಟ್ಟಿ , ಪ್ರಧಾನ ಕಾರ್ಯದರ್ಶಿಯಾಗಿ  ವಿಜಯವಾಣಿ ವರದಿಗಾರ  ವಿದ್ಯಾಧರ ಮೊರಬ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News