ಚಹಾ ಕುಡಿಯಬೇಡಿ ಎಂಬ ಪಾಕ್ ಸಚಿವರ ಹೇಳಿಕೆಗೆ ವ್ಯಾಪಕ ಟೀಕೆ

Update: 2022-06-16 18:28 GMT

ಇಸ್ಲಮಾಬಾದ್, ಜೂ.16: ಆಮದು ವೆಚ್ಚವನ್ನು ತಗ್ಗಿಸಲು ದೇಶದ ಜನತೆ ಚಹಾ ಸೇವನೆ ಕಡಿಮೆ ಮಾಡಬೇಕು ಎಂದು ಹೇಳಿಕೆ ನೀಡಿದ ಪಾಕಿಸ್ತಾನದ ಸಚಿವರು ಈಗ ಎಲ್ಲೆಡೆಯಿಂ ಟೀಕಾಪ್ರಹಾರ ಎದುರಿಸುವಂತಾಗಿದೆ.

220 ಮಿಲಿಯನ್ ಜನಸಂಖ್ಯೆಯಿರುವ ಪಾಕಿಸ್ತಾನದಲ್ಲಿ ಚಹಾ ಜನಪ್ರಿಯ ಪಾನೀಯವಾಗಿದ್ದು ಜನತೆ ದಿನಕ್ಕೆ ಕನಿಷ್ಟ 3 ಕಪ್ ಚಹಾ ಕುಡಿಯುತ್ತಾರೆ. ಆ ದೇಶ ವಿಶ್ವದಲ್ಲಿ ಅತ್ಯಧಿಕ ಚಹಾಪುಡಿ ಆಮದು ಮಾಡಿಕೊಳ್ಳುವ ದೇಶಗಳ ಪಟ್ಟಿಯಲ್ಲಿದ್ದು ವಾರ್ಷಿಕ 600 ಮಿಲಿಯನ್ ಡಾಲರ್ ವೊತ್ತದ ಚಹಾಪುಡಿ ಆಮದಾಗುತ್ತದೆ.
ಚಹಾಸೇವನೆ ಕಡಿಮೆ ಮಾಡಿ ಆಮದು ವೆಚ್ಚ ಉಳಿಸಿ ಎಂದು ಪಾಕಿಸ್ತಾನದ ಯೋಜನಾ ಸಚಿವ ಅಷಾನ್ ಇಕ್ಬಾಲ್ ಬುಧವಾರ ಜನರಲ್ಲಿ ಮನವಿ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು ಸಚಿವರು ರಾಜೀನಾಮೆ ನೀಡಲಿ ಎಂದು ಹಲವರು ಆಗ್ರಹಿಸಿದ್ದಾರೆ.ನಿನ್ನೆ ಚಹಾ ಕಡಿಮೆ ಕುಡಿಯಿರಿ ಎಂದು ಹೇಳಿದ ಸಚಿವರು ನಾಳೆ ಕಡಿಮೆ ತಿನ್ನಿ ಎನ್ನಬಹುದು. ಸಮಸ್ಯೆಗೆ ಇದು ಪರಿಹಾರವೆೀ ? ಎಂದು ಹಲವರು ಪ್ರಶ್ನಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News