ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಡೇರಾ ಮುಖ್ಯಸ್ಥ ಗುರ್ಮೀತ್ ಗೆ ಒಂದು ತಿಂಗಳ ಪೆರೋಲ್
Update: 2022-06-17 11:47 IST
ಚಂಡೀಗಢ: ಜೈಲಿನಲ್ಲಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಗೆ ಹರ್ಯಾಣದ ಬಿಜೆಪಿ ಆಡಳಿತದ ಸರಕಾರ ಒಂದು ತಿಂಗಳ ಪೆರೋಲ್ ನೀಡಿದೆ.
ಗುರ್ಮೀತ್ ಸಿಂಗ್ 2017 ರಲ್ಲಿ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ನಂತರ ಹರ್ಯಾಣದ ರೋಹ್ಟಕ್ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. 2002ರಲ್ಲಿ ತನ್ನ ಮ್ಯಾನೇಜರ್ನ ಕೊಲೆ ಪ್ರಕರಣದಲ್ಲಿಯೂ ಆತನಿಗೆ ಶಿಕ್ಷೆಯಾಗಿದೆ.
ಗುರ್ಮೀತ್ ಸಿಂಗ್ ಗೆ ಶಿಕ್ಷೆಯ ನಂತರ ಮೊದಲ ಬಾರಿಗೆ ಪೆರೋಲ್ ನೀಡಲಾಗಿದ್ದರೂ ಡೇರಾ ಮುಖ್ಯಸ್ಥ ಇಲ್ಲಿಯವರೆಗೆ ನಾಲ್ಕು ಬಾರಿ ಫರ್ಲೋ ಮೇಲೆ ಜೈಲಿನಿಂದ ಹೊರಬಂದಿದ್ದಾನೆ. ಇತ್ತೀಚೆಗೆ ಫೆಬ್ರವರಿಯಲ್ಲಿ ಮೂರು ವಾರಗಳ ಫರ್ಲೋ ನೀಡಲಾಯಿತು.