×
Ad

ಶ್ವಾಸಕೋಶದ ಸೋಂಕಿಗಾಗಿ ಸೋನಿಯಾ ಗಾಂಧಿ ಚಿಕಿತ್ಸೆ ಪಡೆಯುತ್ತಿದ್ದಾರೆ: ಕಾಂಗ್ರೆಸ್

Update: 2022-06-17 11:49 IST
Photo:PTI

ಹೊಸದಿಲ್ಲಿ: ಸೋನಿಯಾ ಗಾಂಧಿ ಅವರು ಕೋವಿಡ್ ನಂತರದ ರೋಗಲಕ್ಷಣಗಳೊಂದಿಗೆ ಬಳಲುತ್ತಿದ್ದು ಅವರು ಶಾಸ್ವಕೋಶ ಸೋಂಕಿಗಾಗಿ   ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ ಎಂದು NDTV ವರದಿ ಮಾಡಿದೆ.

ಜೂನ್ 12 ರಂದು  ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರು ಕೋವಿಡ್ ಸಮಸ್ಯೆ ಹಾಗೂ  ವಿಪರೀತ ಮೂಗಿನ ರಕ್ತಸ್ರಾವದಿಂದ ದಿಲ್ಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಜೂನ್ 1 ರಂದು ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯು ಜೂನ್ 23 ರಂದು ವಿಚಾರಣೆ ಹಾಜರಾಗಲು  ಸಮನ್ಸ್ ಜಾರಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News