×
Ad

ಪ್ರತಿಭಟನಾಕಾರರ ಕಲ್ಲುತೂರಾಟದಿಂದ ತಪ್ಪಿಸಿಕೊಳ್ಳಲು ಪೊಲೀಸರ ಹಿಂದೆ ರಕ್ಷಣೆಗಾಗಿ ಮಗುವಿನೊಂದಿಗೆ ಓಡಿದ ವ್ಯಕ್ತಿ

Update: 2022-06-17 13:32 IST

ಮಥುರಾ: ‘ಅಗ್ನಿಪಥ’ ರಕ್ಷಣಾ ನೇಮಕಾತಿ ಯೋಜನೆಯ ವಿರುದ್ಧ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಿಂದ ಕುಟುಂಬವೊಂದು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ವ್ಯಕ್ತಿಯೊಬ್ಬ ತನ್ನ ಮಗುವನ್ನು ಎತ್ತಿಕೊಂಡು ಪೊಲೀಸರ ಹಿಂದೆ ರಕ್ಷಣೆಗಾಗಿ ಓಡುತ್ತಿರುವ ದೃಶ್ಯ ಶುಕ್ರವಾರ ಮಥುರಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಹಲವಾರು ರಾಜ್ಯಗಳಲ್ಲಿ ಯುವಕರು ಕೇಂದ್ರದ ಹೊಸ ಯೋಜನೆಯ ವಿರುದ್ಧ ಪ್ರತಿಭಟನೆ  ಮುಂದುವರಿಸಿದ್ದಾರೆ.

ಪಶ್ಚಿಮ ಉತ್ತರ ಪ್ರದೇಶದ ಜಿಲ್ಲೆಯ ಮೂಲಕ ಹಾದುಹೋಗುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದೃಶ್ಯ ಕಂಡುಬಂದಿದೆ. ಪೊಲೀಸರು ಪ್ರತಿಭಟನಾಕಾರರನ್ನು ಬೆನ್ನಟ್ಟುವುದನ್ನು ಹಾಗೂ  ಹೆದ್ದಾರಿಯಲ್ಲಿ ಅವರ ಮೇಲೆ ಅಶ್ರುವಾಯು ಸಿಡಿಸುವ ದೃಶ್ಯ ಕಂಡುಬಂದಿದೆ. ಹೆದ್ದಾರಿಯಲ್ಲಿದ್ದ ಹಲವು ಕಾರುಗಳು ಹಾಗೂ  ಟ್ರಕ್‌ಗಳ ಕಿಟಕಿ ಗಾಜುಗಳನ್ನೂ ಪ್ರತಿಭಟನಾಕಾರರು ಒಡೆದು ಹಾಕಿದ್ದಾರೆ.

ಪೂರ್ವ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಶುಕ್ರವಾರ ಬೆಳಗ್ಗೆ ರೈಲ್ವೇ ನಿಲ್ದಾಣಕ್ಕೆ ನುಗ್ಗಿದ ಗುಂಪೊಂದು ಕೋಚ್‌ಗೆ ಬೆಂಕಿ ಹಚ್ಚಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡುವ ಮೊದಲು ರೈಲು ನಿಲ್ದಾಣದ ಆಸ್ತಿಯನ್ನು ಸಹ ಹಾನಿಗೊಳಿಸಿದರು.

ಮಂಗಳವಾರ ಘೋಷಿಸಿದ ಈ ಯೋಜನೆಗೆ ಸರಕಾರ ಕೆಲವು ಪ್ರಯೋಜನಗಳನ್ನು ಸೇರಿಸಿದ ನಂತರವೂ ಪ್ರತಿಭಟನಾಕಾರರ ಆಕ್ರೋಶ ಮಾತ್ರ ಕಡಿಮೆಯಾಗಲಿಲ್ಲ. ಈ ಯೋಜನೆಯಲ್ಲಿ  ಭೂಸೇನೆ, ನೌಕಾಪಡೆ ಹಾಗೂ  ವಾಯುಸೇನೆಗೆ ನಾಲ್ಕು ವರ್ಷಗಳ ಅಲ್ಪಾವಧಿಯ ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News