ನೂಪುರ್ ಶರ್ಮಾ ನಾಪತ್ತೆ: 5 ದಿನಗಳಿಂದ ಹುಡುಕುತ್ತಿರುವ ಮುಂಬೈ ಪೊಲೀಸರು; ವರದಿ

Update: 2022-06-17 12:59 GMT
ನೂಪುರ್ ಶರ್ಮ (Credit: Twitter/@NupurSharmaBJP)

ಹೊಸದಿಲ್ಲಿ: ಪ್ರವಾದಿ ಮುಹಮ್ಮದ್ ಅವರ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ ಆರೋಪ ಹೊತ್ತಿರುವ ಹಾಗೂ ಹಲವಾರು ರಾಜ್ಯಗಳಲ್ಲಿ ಪ್ರಕರಣ ಎದುರಿಸುತ್ತಿರುವ ಇದೀಗ ಉಚ್ಛಾಟಿತ ಬಿಜೆಪಿ ವಕ್ತಾರೆ ನೂಪುರ್ ಶರ್ಮ ಅವರು ಎಲ್ಲಿದ್ದಾರೆಂದು ತಿಳಿದಿಲ್ಲವೆನ್ನಲಾಗಿದೆ ಎಂದು ndtv ವರದಿ ಮಾಡಿದೆ.

ಆಕೆಯ ವಿಚಾರಣೆ ನಡೆಸಲೆಂದು ದಿಲ್ಲಿಗೆ ತೆರಳಿರುವ ಮುಂಬೈ ಪೊಲೀಸ್ ತಂಡಕ್ಕೆ ಆಕೆಯನ್ನು ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ ಎಂದು  ಮೂಲಗಳು ತಿಳಿಸಿವೆ. ಆಕೆಯನ್ನು ಬಂಧಿಸಲು ಮುಂಬೈ ಪೊಲೀಸರಿಗೆ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಮಹಾರಾಷ್ಟ್ರ ಗೃಹ ಸಚಿವಾಲಯ ಮೂಲಗಳು ತಿಳಿಸಿವೆ.

ಆಕೆಯನ್ನು ಹುಡುಕುವ ಸಲುವಾಗಿ ಮುಂಬೈ ಪೊಲೀಸ್ ತಂಡ ಕಳೆದ ಐದು ದಿನಗಳಿಂದ ರಾಜಧಾನಿಯಲ್ಲಿಯೇ ಇದೆ.

ಮುಸ್ಲಿಂ ಸಂಘಟನೆ ರಾಝಾ ಅಕಾಡೆಮಿಯ ಜಂಟಿ ಕಾರ್ಯದರ್ಶಿ ಇರ್ಫಾನ್ ಶೇಖ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಮುಂಬೈ ಪೊಲೀಸರು ಮೇ 28ರಂದು ನೂಪುರ್ ಶರ್ಮ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಶರ್ಮ ಅವರ ವಿರುದ್ಧ ಕೊಲ್ಕತ್ತಾ ಪೊಲೀಸರು ಕೂಡ ಪ್ರಕರಣ ದಾಖಲಿಸಿದ್ದು ಆಕೆಯ ಹೇಳಿಕೆ ದಾಖಲಿಸಿಕೊಳ್ಳಲು ಆಕೆಗೆ ಜೂನ್ 20ರಂದು ಹಾಜರಾಗಲು ಸೂಚನೆ ನೀಡಿದ್ದಾರೆ. ಟಿಎಂಸಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಅಬುಲ್ ಸೊಹೈಲ್ ಆಕೆಯ ವಿರುದ್ಧ ದೂರು ನೀಡಿದ್ದರು.

ದಿಲ್ಲಿಯಲ್ಲೂ ಆಕೆಯ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News