ಭಟ್ಕಳ; ಪ್ರವಾದಿ ನಿಂದಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರಾಷ್ಟ್ರಪತಿಗೆ ಮನವಿ

Update: 2022-06-18 17:17 GMT

ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರ್ ರನ್ನು ಅವಹೇಳನ ಮಾಡಿರುವ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ರನ್ನು ಕೂಡಲೇ ಬಂಧಿಸಬೇಕೆಂದು ಭಟ್ಕಳದ  ಮಜ್ಲಿಸೆ-ಇಸ್ಲಾಹ್-ವ-ತಂಝಿಮ್ ಸರ್ಕಾರವನ್ನು ಆಗ್ರಹಿಸಿದ್ದು, ಬೇಡಿಕೆ ಈಡೇರದಿದ್ದರೆ ಜಿಲ್ಲಾಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದೆ. 

ಶನಿವಾರ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತರ ಮೂಲಕ ಭಾರತದ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ತಂಝೀಮ್ ಮುಖಂಡ ಡಾ.ಹನೀಫ್ ಶಬಾಬ್, ಪ್ರವಾದಿ ನಿಂದಕರನ್ನು ಮುಸ್ಲಿಮ್ ಸಮುದಯವಷ್ಟೇ ಅಲ್ಲದೇ ಈ ದೇಶವು ಸಹ ಎಂದಿಗೂ ಕ್ಷಮಿಸದು, ಇಂದು ಭಾರತದಾದ್ಯಂತ ನಡೆಯುತ್ತಿರುವ ಹಿಂಸಾಚಾರಕ್ಕೆ ನೂಪುರ್ ಶರ್ಮಾ ಮತ್ತು ನವೀನ್ ಜುಂದಾಲ್ ಕಾರಣನಾಗಿದ್ದು ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಆದ್ದರಿಂದ ಕೂಡಲೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ಮುಝಮ್ಮಿಲ್ ಖಝಿಯಾ ಮಾತನಾಡಿದರು.

ತಂಝೀಮ್ ಉಪಾಧ್ಯಕ್ಷ ಮೊಹ್ತೆಶಮ್ ಮುಹಮ್ಮದ್ ಜಾಫರ್, ಜಮಾಅತುಲ್ ಮುಸ್ಲಿಮೀನ್ ಖಾಝಿ ಮೌಲಾನಾ ಅಬ್ದುಲ್ ರಬ್ ಖತೀಬ್ ನದ್ವಿ, ಮರ್ಖಝಿ ಖಲೀಫ ಜಮಾಅತುಲ್ ಮುಸ್ಲಿಮೀನ್ ಖಾಜಿ ಮೌಲಾನಾ ಕ್ವಾಜಾ ಮೊಯಿನುದ್ದೀನ್ ಅಕ್ರಮಿ ಮದನಿ, ಸಂಘಟನೆಯ ಕಾರ್ಯದರ್ಶಿ ಜಿಲಾನಿ ಶಾಬಂದ್ರಿ, ಭಟ್ಕಳ ಮುಸ್ಲಿಂ ಯುತ್ ಫೆಡರೇಶನ್ ಅಧ್ಯಕ್ಷ ಅಝೀಝರ‍್ರಹ್ಮಾನ್ ನದ್ವಿ ರುಕ್ನುದ್ದೀನ್, ಪ್ರಧಾನ ಕಾರ್ಯದರ್ಶಿ ಉಮೈರ್ ರುಕ್ನುದ್ದೀನ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮುಹಮ್ಮದ್ ತೌಫಿಕ  ಬ್ಯಾರಿ, ವೆಲ್ಫೇರ್ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸಿಫ್ ಶೇಖ್, ಅಂಜುಮನ್ ಹಾಮಿಯೆ ಮುಸ್ಲಿಮೀನ್ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಇಸ್ಮಾಯಿಲ್, ಮಾಜಿ ಕಾರ್ಯದರ್ಶಿ ಭಟ್ಕಳ ಮುಸ್ಲಿಂ ಗಲ್ಫ್ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ಎಸ್‌ಜೆ ಸೈಯದ್ ಹಾಶಿಮ್, ಯುತ್ ಫೆಡರೇಶನ್ ಮಾಜಿ ಅಧ್ಯಕ್ಷ ಇಮ್ತಿಯಾಝ್ ಉದ್ಯಾವರ, ಅಂಜುಮಾನ್ ಉಪಾಧ್ಯಕ್ಷ ಮುಹಮ್ಮದ್ ಸಾದಿಕ್ ಪಿಲ್ಲೂರ್, ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೌಲಾನ ಅಬ್ದುಲ್ ಅಲೀಂ ಖಾಸ್ಮಿ, ಪ್ರಾಂಶುಪಾಲ ಮೌಲಾನಾ ಮಕ್ಬೂಲ್ ಕೊಬಟ್ಟೆ ನದ್ವಿ, ಜಮಾತೆ ಮುಸ್ಲಿಮೀನ್ ಭಟ್ಕಳ ಕಾರ್ಯದರ್ಶಿ ಮೌಲಾನ ತಲ್ಹಾ ರುಕ್ನುದಿನ್ ನದ್ವಿ, ಅಲಿಮಿಯಾ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್ ಇಲ್ಯಾಸ್ ನದ್ವಿ, ಮೌಲಾನಾ ಅನ್ಸಾರ್ ಖತೀಬ್ ಮದನಿ, ಮೌಲ್ವಿ ಅಂಜುಮ್ ಗಂಗವಾಲಿ ಮೌಲಾನಾ ಒಸಾಮಾ ನದ್ವಿ, ಮೌಲಾನಾ ಅಮೀನ್ ರುಕ್‌ನುದ್ದೀನ್ ನದ್ವಿ, ಪುರಸಭೆ ಸದಸ್ಯರು, ಪಂಚಾಯಿತಿ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News