ಪಿಯುಸಿ ಪರೀಕ್ಷೆ ; ಭಟ್ಕಳದ ದಿ ನ್ಯೂ ಇಂಗ್ಲಿಷ್‌ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ

Update: 2022-06-18 17:33 GMT

ಭಟ್ಕಳ: ಏಪ್ರಿಲ್ 2022 ರಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಭಟ್ಕಳದ  ದಿ ನ್ಯೂ ಇಂಗ್ಲಿಷ್ ಪಿ ಯು ಕಾಲೇಜು ಉತ್ತಮ ಸಾಧನೆ ಮಾಡಿದ್ದು, ಪರೀಕ್ಷೆಗೆ ಹಾಜರಾದ 323 ವಿದ್ಯಾರ್ಥಿಗಳಲ್ಲಿ 307 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ ಶೇಕಡಾ 95.04%  ಫಲಿತಾಂಶವನ್ನು ದಾಖಲಿಸಿದೆ.‌

92 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರೆ, 177 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. 

ವಾಣಿಜ್ಯ ವಿಭಾಗದಲ್ಲಿ 221 ವಿದ್ಯಾರ್ಥಿಗಳಲ್ಲಿ 210 ತೇರ್ಗಡೆಯಾಗುವುದರ ಮೂಲಕ 95.02% ಫಲಿತಾಂಶ ದಾಖಲಿಸಿ ಶ್ರೀನಿಧಿ ಪೈ 97.84%  ನೊಂದಿಗೆ ಪ್ರಥಮ, ಅಪರ್ಣಾ ಕಾಮತ್ ಮತ್ತು ಭೂಮಿಕಾ ಕಾಮತ್ 97.67% ನೊಂದಿಗೆ ದ್ವೀತಿಯ ಮತ್ತು ಸಂಧ್ಯಾ ಬೈಂದೂರು  ಮತ್ತು ಪ್ರಿಯಾಂಕಾ ಕಾಮತ್ 97.50% ನೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ವಿಜ್ಞಾನ ವಿಭಾಗದಲ್ಲಿ 80 ವಿದ್ಯಾರ್ಥಿಗಳಲ್ಲಿ 75 ತೇರ್ಗಡೆಯಾಗುವುದರ ಮೂಲಕ 93.75% ಫಲಿತಾಂಶ ದಾಖಲಿಸಿ ಅಮಾನ ಮುಷ್ತಾಕ್ ಅಹ್ಮದ್ ಸೈಯದ್ 97.84% ನೊಂದಿಗೆ ಪ್ರಥಮ, ಪ್ರಮೋದ ಚಿತ್ರಾಪುರ  96.50% ನೊಂದಿಗೆ ದ್ವಿತೀಯ ಮತ್ತು ಪ್ರಶಾಂತಿ ಹೆಬ್ಬಾರ 96.17% ನೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ಕಲಾ ವಿಭಾಗದಲ್ಲಿ 22 ವಿದ್ಯಾರ್ಥಿಗಳಲ್ಲಿ 22 ತೇರ್ಗಡೆಯಾಗುವುದರ ಮೂಲಕ 100% ಫಲಿತಾಂಶ ದಾಖಲಿಸಿ ಚಂದನಾ ನಾಯ್ಕ 94.50% ನೊಂದಿಗೆ ಪ್ರಥಮ, ಲಿಡಿಯ ಬಸ್ಟ್ಯಾಂವ್ ಲೂಯಿಸ್ 94.34% ನೊಂದಿಗೆ ದ್ವೀತಿಯ ಮತ್ತು ವಿಜೇತಾ ನಾಯ್ಕ  91.67% ನೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ವಾಣಿಜ್ಯ ವಿದ್ಯಾರ್ಥಿಗಳಾದ  ಅಪರ್ಣಾ ಕಾಮತ್ ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಸಂಖ್ಯಾಶಾಸ್ತ್ರ, ಪ್ರಿಯಾಂಕ ಕಾಮತ್ ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ, ಲೆಕ್ಕಶಾಸ್ತ್ರ, ಸಂಧ್ಯಾ ಬೈಂದೂರು ಸಂಖ್ಯಾಶಾಸ್ತ್ರ, ಲೆಕ್ಕಶಾಸ್ತ್ರ, ಶ್ರೀನಿಧಿ ಪೈ ವ್ಯವಹಾರ ಅಧ್ಯಯನ, ಸಂಖ್ಯಾಶಾಸ್ತ್ರ, ಭೂಮಿಕಾ ಕಾಮತ್ ಸಂಖ್ಯಾಶಾಸ್ತ್ರ, ದೀಪ್ತಿ ಡಿ ಸಂಖ್ಯಾಶಾಸ್ತ್ರ , ವನುಜಾ ನಾಯ್ಕ ಸಂಖ್ಯಾಶಾಸ್ತ್ರ, ನಾಗರತ್ನ ನಾಯ್ಕ ಗಣಕಶಾಸ್ತ್ರ, ಸಹನಾ ಪಿ ಗಣಕಶಾಸ್ತ್ರ, ತೇಜಸ್ವಿನಿ ಭಟ್ ಗಣಕಶಾಸ್ತ್ರ, ಪುಷ್ಪಾ ನಾಯ್ಕ ಅರ್ಥಶಾಸ್ತ್ರ ವಿಷಯಗಳಲ್ಲಿ ವಿಜ್ಞಾನ ವಿದ್ಯಾರ್ಥಿಗಳಾದ ಅಮಾನ ಮುಷ್ತಾಕ್ ಅಹ್ಮದ್ ಸೈಯದ್ ರಸಾಯನ ಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ, ಹೇಮಾ ನಾಯ್ಕ   ರಸಾಯನ ಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ, ದೀಕ್ಷಾ ನಾಯ್ಕ ಗಣಿತ, ದೀಪಾ ದೇವಾಡಿಗ ಗಣಕವಿಜ್ಞಾನ, ಮೇಘಾ ಶಾನಭಾಗ ಗಣಿತ, ನಿಖಿತಾ ಮೊಗೇರ ಜೀವಶಾಸ್ತ್ರ, ಪ್ರಮೋದ ಚಿತ್ರಾಪುರ ಗಣಿತ, ಪ್ರಶಾಂತಿ ಹೆಬ್ಬಾರ ಗಣಕಶಾಸ್ತ್ರ, ಪ್ರಿಯಾ  ದೇವಾಡಿಗ ಗಣಕಶಾಸ್ತ್ರ ಹಾಗೂ ಕಲಾ ವಿಭಾಗದಲ್ಲಿ ಚಂದನಾ ನಾಯ್ಕ ಶಿಕ್ಷಣಶಾಸ್ತ್ರ, ಕಪಿಲ್ ಭಟ್ ಶಿಕ್ಷಣಶಾಸ್ತ್ರದಲ್ಲಿ 100/100 ಅಂಕಗಳನ್ನು ಪಡೆದುಕೊಂಡಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸುರೇಶ ನಾಯಕ್, ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಅರ್.ಜಿ. ಕೊಲ್ಲೆ ,  ಟ್ರಸ್ಟಿ ಮೆನೇಜರ್ ರಾಜೇಶ ನಾಯಕ್ ಹಾಗೂ ಪ್ರಾಂಶುಪಾಲರಾದ ವಿರೇಂದ್ರ ಶ್ಯಾನಭಾಗ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News