ಪಿಯು ಪರೀಕ್ಷೆ: ಕ್ರೈಸ್ಟ್‌ ಕಿಂಗ್ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ

Update: 2022-06-18 17:37 GMT

ಕಾರ್ಕಳ : ಕ್ರೈಸ್ಟ್‌ ಕಿಂಗ್ ಪದವಿ ಪೂರ್ವ ಕಾಲೇಜು ಅತ್ಯುತ್ತಮ ಫಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಸತತ 14ನೇ ಬಾರಿ ಶೇ. 100 ಫಲಿತಾಂಶ ಪಡೆದುಕೊಂಡಿದೆ.

ವಿಜ್ಞಾನ ವಿಭಾಗದಲ್ಲಿ 103 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 102 ವಿದ್ಯಾರ್ಥಿಗಳು ಉತ್ತೀರ್ಣರಾಗುವುದ ರೊಂದಿಗೆ  99.02 ಶೇ., ವಾಣಿಜ್ಯ ವಿಭಾಗದ ಸ್ವೀಡಲ್ ಸಾಂಡ್ರ ರೋಡ್ರಿಗಸ್ ಹಾಗೂ ಲಿನಿಶ ಮೆಲಿಶ ಕರ್ಡೋಜ 591 ಅಂಕಗಳನ್ನು ಪಡೆದುಕೊಂಡು ರಾಜ್ಯಮಟ್ಟದಲ್ಲಿ 6ನೇ ರ್‍ಯಾಂಕ್‌ ಹಾಗೂ ಸಂಸ್ಥೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಎಲ್ಸನ್ ಮಥಾಯಸ್ 589 ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ 10 ರ್‍ಯಾಂಕ್‌ ಹಾಗೂ ಸಂಸ್ಥೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ವಾಣಿಜ್ಯ ವಿಭಾಗದಲ್ಲಿ 59 ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದಲ್ಲಿ 52 ವಿದ್ಯಾರ್ಥಿಗಳು ಸೇರಿದಂತೆ ಒಟ್ಟಾರೆಯಾಗಿ 111 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ (ಡಿಸ್ಟಿಂಕ್ಷನ್) ಪಡೆದುಕೊಂಡಿದ್ದಾರೆ. ಉಳಿದಂತೆ ಎಲ್ಲ ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದುಕೊಂಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಲಕ್ಷ್ಮೀ ಕಾಮತ್ 586, ರಾಶಿ ಶೆಟ್ಟಿ 585, ಶ್ರಾವ್ಯ ಎಸ್ 584, ಸುಧೀಕ್ಷಾ ಶೆಟ್ಟಿ 584, ಸುಹಾನಾ 584, ಅನನ್ಯ 582, ಚೈತ್ರಾ ನಾಯಕ್ 582, ಶ್ರೇಯಾ ಜೈನ್ 582, ದೀಪಾ ಅಮೀನ್ 581, ಸುರಕ್ಷಾ 581, ಸುಗಮ್ ಬಂಗೇರ 580, ಜೇಸನ್ ಟೆರಾನ್ ಕೊರ್ಡ 579, ಶ್ರಾವ್ಯ 578, ಪ್ರಾಪ್ತಿ 578, ತೃಪ್ತಿ ಎಂ.ಜೈನ್ 578, ಹಾಜಿರಾ ತಾನಿಸ್ 577, ಹ್ಯಾನ್ಸನ್ ವಾಝ್ 577, ನವ್ಯ ಆರ್ ಶೆಟ್ಟಿ 577, ಪ್ರಿನ್ಸಿಯಾ ಒಲಿವಿಯಾ ಕ್ಯಾಸ್ತಲಿನೊ 577, ಅಂಕಿತಾ 576, ಸೌಭಾಗ್ಯ 575, ಜೋಸ್ನಾ ಲೋಬೋ 573, ನಿಶಾ 572 ಹಾಗೂ ವಿಜ್ಞಾನ ವಿಭಾಗದಲ್ಲಿ ಹಿಬಾ ಸುಲ್ತಾನಾ 587, ರಕ್ಷಿತ್ ಪೂಜಾರಿ 587, ಡೆಲ್ಸನ್ ಲಾಯ್ಡ್ ಡಿ’ಸೋಜ 586, ಮನವಿ ಎಂ.ಶೆಟ್ಟಿ 586, ಏಡನ್ ರಾಯನ್ ಡಿ’ಸೋಜ 582, ದಿವ್ಯ ಸುಹಾಸಿನಿ ಸೋನ್ಸ್ 580, ಆ್ಯರೋನ್ ಫೆರ್ನಾಂಡಿಸ್ 578, ಚೇತನ್ ಪ್ರಭು 577, ಶ್ವೇತಾ 576, ವಿಜೇತಾ ಶೆಟ್ಟಿ 575, ಮೆಲಿಟಾ ವೆಲಾನಿ ಟೆಲ್ಲಿಸ್ 574, ಸುರಕ್ಷಾ 572 ಹೀಗೆ ಎರಡೂ ವಿಭಾಗಗಳಲ್ಲಿ ಒಟ್ಟು 38 ವಿದ್ಯಾಥಿಗಳು ಶೇಕಡಾ 95 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿದ್ದಾರೆ. 

ಕನ್ನಡದಲ್ಲಿ 4, ಭೌತಶಾಸ್ತ್ರದಲ್ಲಿ 1, ರಸಾಯನಶಾಸ್ತ್ರದಲ್ಲಿ 4, ಜೀವಶಾಸ್ತ್ರದಲ್ಲಿ 4, ಗಣಿತದಲ್ಲಿ 16, ಕಂಪ್ಯೂಟರ್ ಸೈನ್ಸ್‍ನಲ್ಲಿ 18, ಸಂಖ್ಯಾಶಾಸ್ತ್ರದಲ್ಲಿ 7, ವ್ಯವಹಾರ ಅಧ್ಯಯನದಲ್ಲಿ 4, ಲೆಕ್ಕಶಾಸ್ತ್ರದಲ್ಲಿ 12  ಹೀಗೆ ವಿಷಯವಾರು ಒಟ್ಟು 70 ನೂರಕ್ಕೆ ನೂರು ಅಂಕಗಳು ಲಭ್ಯವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News