ಪಿಯುಸಿ ಪರೀಕ್ಷೆ : ಅಂಜುಮನ್ ಕಾಲೇಜಿಗೆ ಶೇ.82.58 ಫಲಿತಾಂಶ

Update: 2022-06-18 17:45 GMT

ಭಟ್ಕಳ:ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಪದವಿಪೂರ್ವ ಕಾಲೇಜಿಗೆ ಶೇ. 82.58 ಫಲಿತಾಂಶ ದಾಖಲಾಗಿದೆ ಎಂದು ಪ್ರಾಂಶುಪಾಲ ಯೂಸೂಫ್ ಕೋಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಲಾ ವಿಭಾಗದಲ್ಲಿ ಶೇ. 88.88, ವಿಜ್ಞಾನ ವಿಭಾಗದಲ್ಲಿ ಶೇ.76.31 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ.87.25 ಫಲಿತಾಂಶ ದಾಖಲಾಗಿದೆ.

ವಾಣಿಜ್ಯ ವಿಭಾಗದಲ್ಲಿ ಮುಹಮ್ಮದ್ ಹಿಶಾಮ್ ಖಾಝಿಯಾ ಶೇ.94.33, ಆಹ್ಮದ್ ಸಾಲೀಫ್ ಫಕರ್ದೆ ಶೇ.92.5, ಮುಹಮ್ಮದ್ ಅಫ್ಫಾನ್ ಶೇ.92.5, ಮುಹಮ್ಮದ ನಫಾಫ್ ಮನೆಗಾರ್ ಶೇ. 90.16 ಫಲಿತಾಂಶ ಪಡೆದುಕೊಂಡು ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. 

ವಿಜ್ಞಾನ ವಿಭಾಗದಲ್ಲಿ ಮುಹಮ್ಮದ್ ಝಯ್ಯಾನ್ ಖಾಶಿಮಜಿ ಶೇ.91.16, ಝುರೈಫ್ ಆಹಮದ್ ಶೇ. 90.66, ಅಬ್ದುಲ್ ರಹ್ಮಾನ್ ರುಕ್ನುದ್ದೀನ್ ಶೇ.90 ಅಂಕ ಪಡೆದುಕೊಂಡಿದ್ದಾರೆ. 

ಕಲಾ ವಿಭಾಗದಲ್ಲಿ ಅರ್ಬಾಝ್ ಖಾನ್ ಶೇ.74.8, ಮಹೇಶ್ ನಾಯ್ಕ 74.66 ಹಾಗೂ ಹಸನೈನ್ ಹೊಂಬೈಲ್ 74.33 ಅಂಕಗಳನ್ನು ಪಡೆದುಕೊಂಡಿದ್ದಾರೆ. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಲರು ಹಾಗೂ ಸಿಬ್ಬಂದಿ ವರ್ಗ ಅಭಿನಂಧಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News