×
Ad

ಅಗ್ನಿವೀರರನ್ನು ಡ್ರೈವರ್‌, ಇಲೆಕ್ಟ್ರೀಶಿಯನ್‌ ಕೌಶಲ್ಯದೊಂದಿಗೆ ತರಬೇತುಗೊಳಿಸಲಾಗುವುದು: ಕೇಂದ್ರ ಸಚಿವ ಕಿಶನ್‌ ರೆಡ್ಡಿ

Update: 2022-06-19 20:24 IST

ಹೊಸದಿಲ್ಲಿ: "ಅಗ್ನಿವೀರರನ್ನು ಬಿಜೆಪಿ ಕಚೇರಿಯ ಸೆಕ್ಯೂರಿಟಿ ಗಾರ್ಡ್‌ ಕೆಲಸಕ್ಕೆ ಪರಿಗಣಿಸಲಾಗುವುದು" ಎಂಬ ಬಿಜೆಪಿ ಹಿರಿಯ ನಾಯಕ ಕೈಲಾಶ್‌ ವಿಜಯವರ್ಗಿಯರ ಹೇಳಿಕೆ ವಿವಾದ ಸೃಷ್ಟಿಸಿರುವ ಮಧ್ಯೆ ಇದೀಗ ಕೇಂದ್ರ ಸಚಿವ ಜಿ ಕಿಶನ್‌ ರೆಡ್ಡಿ ವಿವಾದಾತ್ಮಕ ಮಾತನ್ನಾಡಿದ್ದಾರೆ. "ಅಗ್ನಿವೀರರಿಗೆ ಡ್ರೈವರ್‌, ಇಲೆಕ್ಟ್ರೀಶಿಯನ್‌, ವಾಶರ್‌ಮೆನ್‌ (ತೊಳೆಯುವವ) ಹಾಗೂ ಕ್ಷೌರಿಕರ ಕೌಶಲ್ಯಗಳ ತರಬೇತಿ ನೀಡಲಾಗುವುದು" ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ಇದು ವಿವಾದಕ್ಕೀಡಾಗಿದೆ.

ಕೇಂದ್ರ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆಯನ್ನು ನೀಡಿದ್ದು, ಕಿಶನ್ ರೆಡ್ಡಿ ಅವರ ಹೇಳಿಕೆಗಳ ವೀಡಿಯೊವನ್ನು ಸಾಮಾಜಿಕ ತಾಣಗಳಲ್ಲಿ ಹಲವಾರು ಬಾರಿ ಹಂಚಿಕೊಳ್ಳಲಾಗಿದೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಸೇನಾ ನಾಯಕಿ ಮತ್ತು ಸಂಸದೆ ಪ್ರಿಯಾಂಕಾ ಚತುರ್ವೇದಿ, "ಸಶಸ್ತ್ರ ಪಡೆಗಳು ಈಗ ಅಗ್ನಿಪಥ್ ನೇಮಕಾತಿ ಯೋಜನೆಯಡಿ ಚಾಲಕರು, ಎಲೆಕ್ಟ್ರಿಷಿಯನ್ ಮುಂತಾದಂತೆ ದೇಶಕ್ಕೆ ನುರಿತ ಕಾರ್ಮಿಕ ಪಡೆಗಳಿಗಿರುವ ತರಬೇತಿ ಕೇಂದ್ರವಾಗಲಿದೆ. ಹೊಸ ಸಾಧನೆಯನ್ನು ಅನ್ಲಾಕ್ ಮಾಡಲಾಗಿದೆ!" ಎಂದು ಕುಹಕವಾಡಿದ್ದಾರೆ. "ಇದು ಭಾರತೀಯ ಭೂಸೇನೆ, ವಾಯು ಸೇನೆ, ಮತ್ತು ನೌಕಾ ಸೇನೆಗೆ ಮಾಡಿದ ಅಪಮಾನವಾಗಿದೆ" ಎಂದು ಬಳಕೆದಾರರೋರ್ವರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News