ಕರಾಚಿ: ನವಜಾತ ಶಿಶುವಿನ ತಲೆ ಕತ್ತರಿಸಿ ಗರ್ಭದಲ್ಲೇ ಉಳಿಸಿದ ಆಸ್ಪತ್ರೆ ಸಿಬ್ಬಂದಿ!

Update: 2022-06-21 03:05 GMT
ಸಾಂದರ್ಭಿಕ ಚಿತ್ರ

ಕರಾಚಿ: ನವಜಾತ ಶಿಶುವಿನ ತಲೆ ಕತ್ತರಿಸಿ ತಾಯಿಯ ಗರ್ಭದಲ್ಲೇ ಉಳಿಸಿದ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.

ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ನಡೆದ ಈ ವೈದ್ಯಕೀಯ ನಿರ್ಲಕ್ಷ್ಯದ ಕ್ರಮದಿಂದಾಗಿ 32 ವರ್ಷ ವಯಸ್ಸಿನ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆಗೆ ಕಾರಣರಾದವರನ್ನು ಪತ್ತೆ ಮಾಡಲು ಮತ್ತು ಘಟನೆಯ ವಿಚಾರಣೆಗೆ ಸಿಂಧ್ ಸರ್ಕಾರ ವೈದ್ಯಕೀಯ ತನಿಖಾ ಮಂಡಳಿಯನ್ನು ರಚಿಸಿದೆ ಎಂದು ndtv.com ವರದಿ ಮಾಡಿದೆ. 

"ಗುಡ್ಡಗಾಡು ಜಿಲ್ಲೆಯಾದ ಥಾರ್‍ಪಾರ್ಕರ್‌ ನ ಆದಿವಾಸಿ ಮಹಿಳೆ ಮೊದಲು ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದಾಗ ಪ್ರಸೂತಿ ತಜ್ಞರು ಲಭ್ಯ ಇರಲಿಲ್ಲ. ಅನನುಭವಿ ಸಿಬ್ಬಂದಿಯ ಕ್ರಮದಿಂದ ಆಕೆಗೆ ಆಘಾತವಾಗಿದೆ" ಎಂದು ಜಮ್‍ಶೋರೊ ಲಿಖಾಯತ್ ವೈದ್ಯಕೀಯ ಮತ್ತು ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಪ್ರಸೂತಿ ವಿಭಾಗದ ಮುಖ್ಯಸ್ಥ ಪ್ರೊ. ರಹೀಲ್ ಸಿಕಂದರ್ ಹೇಳಿದ್ದಾರೆ.

ತಾಯಿಯ ಗರ್ಭದಲ್ಲೇ ನವಜಾತ ಶಿಶುವಿನ ತಲೆಯನ್ನು ಕತ್ತರಿಸಿದ ಆರ್‌ಎಚ್‍ಸಿ ಸಿಬ್ಬಂದಿ, ಅಲ್ಲೇ ಬಿಟ್ಟು ಶಸ್ತ್ರಚಿಕಿತ್ಸೆ ಮುಗಿಸಿದರು ಎಂದು ಅವರು ವಿವರಿಸಿದ್ದಾರೆ.

ಮಹಿಳೆ ಮಾರಣಾಂತಿಕ ಆರೋಗ್ಯ ಸಮಸ್ಯೆ ಎದುರಿಸಿದಾಗ, ಮಿತಿ ಎಂಬಲ್ಲಿನ ಆಸ್ಪತ್ರೆಗೆ ಧಾವಿಸಿದರು. ಬಳಿಕ ಕುಟುಂಬದವರು ಎಲ್‍ಯುಎಂಎಚ್‍ಎಸ್‍ಗೆ ಕರೆದುಕೊಂಡು ಬಂದಾಗ ಮಗುವಿನ ತಲೆಯನ್ನು ಗರ್ಭದಿಂದ ಹೊರತೆಗೆಯಲಾಯಿತು ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News