ಫೇಸ್‌ಬುಕ್ ಒಪ್ಪಂದ ಕುರಿತು ಮಾಹಿತಿ ನೀಡದ ರಿಲಯನ್ಸ್‌ ಸಂಸ್ಥೆಗೆ ಸೆಬಿಯಿಂದ ರೂ. 30 ಲಕ್ಷ ದಂಡ

Update: 2022-06-21 11:29 GMT

 ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ನ ಜಿಯೋ ಪ್ಲಾಟ್‌ಫಾರ್ಮ್‌ನಲ್ಲಿ ಎಪ್ರಿಲ್‌ 2020 ರಲ್ಲಿ ಫೇಸ್ಬುಕ್‌ ಮಾಡಿದ್ದ 5.7 ಬಿಲಿಯನ್‌ ಡಾಲರ್‌ ಹೂಡಿಕೆ ಬಗ್ಗೆ ಮಾಹಿತಿ ನೀಡದ ತಪ್ಪಿಗೆ ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತದರ ಇಬ್ಬರು ಅನುಸರಣೆ ಅಧಿಕಾರಿಗಳಿಗೆ ಸೆಬಿ ಜೂನ್‌ 20 ರಂದು ರೂ 30 ಲಕ್ಷ ದಂಡ ವಿಧಿಸಿದೆ.

ಜಿಯೋ ಸಂಸ್ಥೆಯಲ್ಲಿ ಫೇಸ್ಬುಕ್‌ ಹೂಡಿಕೆಯಿಂದ ಲಕ್ಷಾಂತರ ಸಣ್ಣ ಉದ್ದಿಮೆಗಳಿಗೆ ಪಾವತಿ ಸೇವೆಗಳನ್ನು ಒದಗಿಸಲು ವಾಟ್ಸ್ಯಾಪ್‌ಗೆ ಅನುಮತಿಸುವ ಉದ್ದೇಶದಿಂದ ಈ ಹೂಡಿಕೆ ಮಾಡಲಾಗಿತ್ತು. ಈ ಕುರಿತು ತಾನಾಗಿಯೇ ಮಾಹಿತಿ ನೀಡುವುದು ರಿಲಯನ್ಸ್‌ ಸಂಸ್ಥೆಯ ಕರ್ತವ್ಯವಾಗಿತ್ತು ಎಂದು ಸೆಬಿ ಹೇಳಿದೆ.

ಈ ಒಪ್ಪಂದದಿಂದಾಗಿ ರಿಲಯನ್ಸ್‌ ಸಂಸ್ಥೆಯ ಸಾಲದ ಹೊರೆ ತಗ್ಗಿಸಲೂ ಸಹಕಾರಿಯಾಗಿತ್ತು.

ಈ ಹೂಡಿಕೆಗಳ ಬಗ್ಗೆ ಮಾರ್ಚ್‌ 2020 ರಲ್ಲಿಯೇ ಮಾಧ್ಯಮಗಳು ವರದಿ ಮಾಡಿ ಹಲವು ವಿವರಗಳನ್ನು ಬಹಿರಂಗಪಡಿಸಿದ್ದರೂ ರಿಲಯನ್ಸ್‌ ಈ ಕುರಿತು ತನಗೆ ಮಾಹಿತಿ ನೀಡಿರಲಿಲ್ಲ ಎಂದು ಸೆಬಿ ಹೇಳಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಈ  ಕುರಿತು ಇನ್ನೂ ಪ್ರತಿಕ್ರಿಯಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News