ಯೆನಪೋಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Update: 2022-06-21 15:55 GMT

ಕೊಣಾಜೆ: ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾಲಯ(ಪರಿಗಣಿತ) ಹಾಗೂ ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಆಶ್ರಯದಲ್ಲಿ ಮಂಗಳವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.

ಯೋಗ ತರಬೇತುದಾರರಾದ ಕುಶಾಲಪ್ಪ ಗೌಡ ಕಾರ್ಯಕ್ರಮದಲ್ಲಿ ಯೋಗದ ಮಹತ್ವವನ್ನು ವಿವರಿಸಿದರು.

ಯೆನೆಪೋಯ ವಿವಿಯ ಕುಲಸಚಿವ  ಡಾ. ಗಂಗಾಧರ ಸೋಮಯಾಜಿ, ಡೀನ್  ಡಾ. ಅಭಯ್ ನಿರ್ಗುಡೆ, ಎನ್ ಎಸ್ ಎಸ್ ಸಂಯೋಜಕರಾದ ಡಾ. ಅಶ್ವಿನಿ ಶೆಟ್ಟಿ,   ಡಾ. ಪದ್ಮಿನಿ,  ಡಾ. ಹರಿಕಿಶೋರ್ ಭಟ್  ಉಪಸ್ಥಿತರಿದ್ದರು.

ಯೆ‌ನೆಪೋಯ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಿ.ಆರ್.ಗ್ರೀಷ್ಮಾ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News