2022ರಲ್ಲಿ ಭಾರತಕ್ಕೆ ಚೀನಾದಿಂದ ರಫ್ತಾಗುವ ಉತ್ಪನ್ನಗಳಲ್ಲಿ ಶೇ 45.51 ರಷ್ಟು ಏರಿಕೆ

Update: 2022-06-22 12:28 GMT
ಸಾಂದರ್ಭಿಕ ಚಿತ್ರ

 ಹೊಸದಿಲ್ಲಿ: ಆರ್ಥಿಕ ವರ್ಷ 2022ರಲ್ಲಿ ಚೀನಾದಿಂದ ಭಾರತಕ್ಕೆ ರಫ್ತು ಶೇ 45.51 ರಷ್ಟು ಏರಿಕೆಯಾಗಿದೆ. ಈ ವರ್ಷ ರೂ 7.02 ಟ್ರಿಲಿಯನ್ ಮೌಲ್ಯದ ಉತ್ಪನ್ನಗಳು ಚೀನಾದಿಂದ ರಫ್ತಾಗಿದ್ದರೆ ಆರ್ಥಿಕ ವರ್ಷ 2021 ರಲ್ಲಿ ಈ ಪ್ರಮಾಣ ರೂ 4.82 ಟ್ರಿಲಿಯನ್ ಆಗಿದೆ ಎಂದು ವಾಣಿಜ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸುತ್ತವೆ.

ಚೀನಾದಿಂದ ಭಾರತಕ್ಕೆ ರಫ್ತಾಗಿರುವ ಉತ್ಪನ್ನಗಳಲ್ಲಿ ಖನಿಜ ಇಂಧನಗಳು, ಖನಿಜ ತೈಲಗಳು, ರಾಸಾಯನಿಕಗಳು, ರಸಗೊಬ್ಬರ, ಪ್ಲಾಸ್ಟಿಕ್, ಕಬ್ಬಿಣ, ಉಕ್ಕು, ವಿದ್ಯುತ್ ಉಪಕರಣಗಳು, ವೈದ್ಯಕೀಯ ಸಲಕರಣೆಗಳು ಸೇರಿವೆ.

ಆರ್ಥಿಕ ವರ್ಷ 2021 ರಲ್ಲಿ ಚೀನಾದಿಂದ ಭಾರತದ ಅಮದು ಶೇ 4.5ರಷ್ಟು ಏರಿಕೆಯಾಗಿದ್ದರೆ ಆರ್ಥಿಕ ವರ್ಷ 2020 ರಲ್ಲಿ ಶೇ 6.21ರಷ್ಟು ಕುಸಿತ ಕಂಡಿತ್ತು.

ಭಾರತ ಮತ್ತು ಚೀನಾ ನಡುವೆ ಇರುವ ಗಡಿ ಉದ್ವಿಗ್ನತೆಯ ನಡುವೆಯೂ ಆ ದೇಶದಿಂದ ಭಾರತಕ್ಕೆ ರಫ್ತಾಗುವ ಉತ್ಪನ್ನಗಳಲ್ಲಿ ಏರಿಕೆಯಾಗಿದೆ.

ಭಾರತದಿಂದ ಚೀನಾಗೆ ರಫ್ತು ಮಾಡಲಾದ ಉತ್ಪನ್ನಗಳ ಪ್ರಮಾಣ ಆರ್ಥಿಕ ವರ್ಷ 2022 ರಲ್ಲಿ ಶೇ 0.61 ರಷ್ಟು ಏರಿಕೆಯಾಗಿದ್ದರೆ ಆರ್ಥಿಕ ವರ್ಷ 2021 ರಲ್ಲಿ ಶೇ 33.59 ರಷ್ಟು ಏರಿಕೆಯಾಗಿದೆ. ಇನ್ನೊಂದೆಡೆ ರಷ್ಯಾದಿಂದ ಭಾರತದ ಆಮದು ಆರ್ಥಿಕ ವರ್ಷ 2022ರಲ್ಲಿ ಶೇ 81ರಷ್ಟು ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News