ರಾಷ್ಟ್ರಪತಿ ಚುನಾವಣೆ:ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಝಡ್ ಭದ್ರತೆ ನೀಡಿದ ಕೇಂದ್ರ
Update: 2022-06-22 20:45 IST
ಹೊಸದಿಲ್ಲಿ,ಜೂ.22: ಮುಂದಿನ ತಿಂಗಳು 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿರುವ ಒಡಿಶಾದ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಅವರಿಗೆ ಕೇಂದ್ರ ಸರಕಾರವು ದಿನದ 24 ಗಂಟೆಗಳ ಕಾಲ ಝಡ್ ಶ್ರೇಣಿಯ ಭದ್ರತೆಯನ್ನು ಒದಗಿಸಿದೆ.
ಮಂಗಳವಾರ ಸಂಜೆ ಗೃಹ ವ್ಯವಹಾರಗಳ ಸಚಿವಾಲಯದಿಂದ ಸ್ವೀಕರಿಸಲಾದ ಆದೇಶದ ಮೇರೆಗೆ ಸಿಆರ್ಪಿಎಫ್ ಬುಧವಾರ ಬೆಳಿಗ್ಗೆಯಿಂದ ಮುರ್ಮು ಅವರಿಗೆ ಸಶಸ್ತ್ರ ರಕ್ಷಣೆಯನ್ನು ಒದಗಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.ಜಾರ್ಖಂಡ್ನ ಮಾಜಿ ರಾಜ್ಯಪಾಲರಾದ ಮುರ್ಮು ಅವರನ್ನು ರಾಷ್ಟ್ರಪತಿ ಚುನಾವಣೆಗೆ ತನ್ನ ಅಭ್ಯರ್ಥಿಯಾಗಿ ಎನ್‌ಡಿಎ ಮಂಗಳವಾರ ಘೋಷಿಸಿತ್ತು.ದೇಶದ ಅತ್ಯುನ್ನತ ಹುದ್ದೆಗೆ ಆಯ್ಕೆಯಾದರೆ ಮುರ್ಮು ಮೊದಲ ಆದಿವಾಸಿ ಮತ್ತು ಎರಡನೇ ಮಹಿಳಾ ರಾಷ್ಟ್ರಪತಿಯಾಗಲಿದ್ದಾರೆ.