ಅಫ್ಘಾನ್: ಎರಡು ದಶಕದಲ್ಲೇ ಅತ್ಯಂತ ಭಯಾನಕ ಭೂಕಂಪ

Update: 2022-06-22 16:38 GMT
ಸಾಂದರ್ಭಿಕ ಚಿತ್ರ

ಕಾಬೂಲ್, ಜೂ.22: ಅಫ್ಘಾನಿಸ್ತಾನದ ಪರ್ವತ ಪ್ರದೇಶಗಳು ಹಾಗೂ ಹಿಂದೂಕುಶ್ ಪರ್ವತಗಳ ಉದ್ದಕ್ಕೂ ದಕ್ಷಿಣ ಏಶ್ಯಾದ ದೊಡ್ಡ ಪ್ರದೇಶವು ದೀರ್ಘಕಾಲದಿಂದ ವಿನಾಶಕಾರಿ ಭೂಕಂಪಕ್ಕೆ ಒಳಗಾಗಿದೆ. ಭೂಕಂಪಕ್ಕೆ ಸಂಬಂಧಿಸಿದಂತೆ ಅಫ್ಘಾನ್ ದೀರ್ಘಾವಧಿಯ ಇತಿಹಾಸವನ್ನು ಹೊಂದಿದೆ. ಆದರೆ ಈಗ ಸಂಭವಿಸಿರುವ ಭೂಕಂಪ ಅಫ್ಘಾನ್‌ನಲ್ಲಿ 2 ದಶಕದಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪವಾಗಿದೆ. ಕಳೆದ 30 ವರ್ಷದಲ್ಲಿ ಅಫ್ಘಾನ್ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಪಟ್ಟಿ ಹೀಗಿದೆ:

1991: ಹಿಂದುಕುಷ್ನಲ್ಲಿ ಸಂಭವಿಸಿದ ಭೂಕಂಪನದಿಂದ ಅಫ್ಘಾನ್, ಪಾಕಿಸ್ತಾನ ಮತ್ತು ಸೋವಿಯತ್ ಯೂನಿಯನ್‌ನಾದ್ಯಂತ 848 ಮಂದಿ ಮೃತಪಟ್ಟಿದ್ದರು.

1997: ಅಫ್ಘಾನ್ ಮತ್ತು ಇರಾನ್ ನಡುವಿನ ಗಡಿಭಾಗದ ಖಯೇನ್‌ನಲ್ಲಿ ಸಂಭವಿಸಿದ 7.2 ತೀವ್ರತೆಯ ಭೂಕಂಪದಲ್ಲಿ ಉಭಯ ದೇಶಗಳ 1,500ಕ್ಕೂ ಅಧಿಕ ಮಂದಿ ಮೃತರಾಗಿದ್ದರು.

1998: ಈಶಾನ್ಯದ ತಖಾರ್ ಪ್ರಾಂತದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಟ 2,300 ಮಂದಿ ಮೃತ್ಯು.

1998: ಇದೇ ವಲಯದಲ್ಲಿ ಮತ್ತೊಂದು ಭೂಕಂಪ, 4,700 ಮಂದಿ ಮೃತ್ಯು.

2002: ಹಿಂದುಕುಷ್‌ನಲ್ಲಿ ಮಾರ್ಚ್‌ನಲ್ಲಿ ಅವಳಿ ಭೂಕಂಪ. ಒಟ್ಟು 1,100 ಮಂದಿ ಮೃತಪಟ್ಟರು.

2015: ಹಿಂದುಕುಷ್ ವಲಯದಲ್ಲಿ ಅಫ್ಘಾನ್‌ನ ಇತಿಹಾಸದಲ್ಲೇ ಅತ್ಯಂತ ತೀವ್ರತೆಯ (7.5 ತೀವ್ರತೆ)ಯ ಭೂಕಂಪ. ಭಾರತ, ಅಫ್ಘಾನ್ ಮತ್ತು ಪಾಕಿಸ್ತಾನದಲ್ಲಿ ಒಟ್ಟು 399 ಮಂದಿ ಮೃತ್ಯು.

 2022: ಪಶ್ಚಿಮದ ಪ್ರಾಂತ ಬದ್ಗೀಸ್‌ನಲ್ಲಿ ಭೂಕಂಪ. ಕನಿಷ್ಟ 26 ಮಂದಿ ಮೃತಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News