ಅಯೋಧ್ಯೆ: ನದಿ ಸ್ನಾನದ ವೇಳೆ ಪತ್ನಿಯನ್ನು ಚುಂಬಿಸಿದ ವ್ಯಕ್ತಿಗೆ ಥಳಿತ

Update: 2022-06-23 04:57 GMT

ಹೊಸದಿಲ್ಲಿ: ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನ ಮಾಡುವ ವೇಳೆ ಪತ್ನಿಯನ್ನು ಚುಂಬಿಸಿದ ವ್ಯಕ್ತಿಯನ್ನು ನಿಂದಿಸಿ ಥಳಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪತ್ನಿಯ ಜತೆಗಿದ್ದ ವ್ಯಕ್ತಿಯನ್ನು ಅಕ್ಕಪಕ್ಕದ ಹಲವು ಮಂದಿ ಎಳೆದು ತಂದು ಥಳಿಸುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಇಂಥ ಅಶ್ಲೀಲತೆಯನ್ನು ಅಯೋಧ್ಯೆಯಲ್ಲಿ ನಾವು ಸಹಿಸುವುದಿಲ್ಲ ಎಂದು ವ್ಯಕ್ತಿಯೊಬ್ಬ ಹೇಳುತ್ತಿರುವುದು ಕೂಡಾ ಕೇಳಿಸುತ್ತಿದೆ. ತನ್ನ ಪತಿಯನ್ನು ರಕ್ಷಿಸಲು ಪತ್ನಿ ಪ್ರಯತ್ನಿಸಿರುವುದು ಕೂಡಾ ವಿಫಲವಾಗಿದೆ.

ಅಂತಿಮವಾಗಿ ಈ ದಂಪತಿಯನ್ನು ಗುಂಪು ನದಿಯಿಂದ ಆಚೆಗೆ ಕಳುಹಿಸಿದೆ. ಈ ಘಟನೆಯ ಸಂಬಂಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಯೋಧ್ಯೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News