ಮೊಗೇರ ಸಮುದಾಯಕ್ಕೆ ಪ.ಜಾ.ಪ್ರಮಾಣ ಪತ್ರ ; ಪರಿಶೀಲನಾ ಸಮಿತಿ ರಚಿಸಿದ ಸರ್ಕಾರ

Update: 2022-06-23 11:57 GMT

ಭಟ್ಕಳ: ಉ.ಕ. ಜಿಲ್ಲೆಯ ಮೊಗೇರ್ ಸಮುದಾಯಕ್ಕೆ 1976 ರಿಂದ ನೀಡುತ್ತಿದ್ದ ಪ.ಜಾ ಪ್ರಮಾಣಪತ್ರವನ್ನು 2014ರಲ್ಲಿ ಸ್ಥಗಿತಗೊಳಿಸಿದ್ದನ್ನು ವಿರೋಧಿಸಿದ ಕಳೆದ ಮೂರು ತಿಂಗಳಿಂದ ಭಟ್ಕಳ ಸಹಾಯಕ ಆಯುಕ್ತರ ಕಚೇರಿ ಎದುರು ನಡೆಸುತ್ತಿದ್ದ ಪ್ರಭಟನೆ ಗೊಂದಲ ನಿವಾರಿಸಲು ಪರಿಶೀಲನ ಸಮಿತಿ ರಚಿಸಿದೆ.

ಈ ಕುರಿತಂತೆ ಗುರುವಾರ ಭಟ್ಕಳಕ್ಕೆ ಭೇಟಿ ನೀಡಿದ ಉ.ಕ.ಜಿಲ್ಲಾಧಿಕಾರಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಉ.ಕ.ಕನ್ನಡ ಜಿಲ್ಲೆಯ ಮೊಗೇರ್ ಸಮುದಾಯದವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆಯುವಲ್ಲಿ ಗೊಂದಲಗಳು ಉಂಟಾಗಿದ್ದು ಪ್ರಸ್ತುತ ಪ.ಜಾ. ಪ್ರಮಾಣ ಪತ್ರ ನೀಡಲು ಅನುಸರಿಸುತ್ತಿರುವ ಮಾನದಂಡಗಳನ್ನು ಮುಂದುವರೆಸುವ ಅಥವಾ ಮಾರ್ಪಡು ಮಾಡುವ ಕುರಿತಂತೆ ಜಿ.ಸಿ. ಪ್ರಕಾಶ ಭಾ.ಆ.ಸೇ. ಪ್ರಾದೇಶಿಕ ಆಯುಕ್ತರು ಮೈಸೂರು ವಿಭಾಗ ಇವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದು ಮೂರು ತಿಂಗಳೊಳಗೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದೆ ಎಂದು ತಿಳಿಸಿದರು.

ಸಮಿತಿಯಲ್ಲಿ ಶ್ರೀಕುಮಾರ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಜಿ.ಪಂ. ದ.ಕ ಜಿಲ್ಲೆ, ಜಿಲ್ಲಾಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉ.ಕ ಜಿಲ್ಲೆ, ಗಂಗಾಧರ್ ಮಾನವ ಶಾಸ್ರ್ತ ವಿಭಾಗ ಮೈಸೂರು ಸದಸ್ಯರಾಗಿದ್ದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಉ.ಕ. ಜಿಲ್ಲೆ ಇವರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಸದರಿ ಸಮಿತಿ ಪ್ರಕರಣವನ್ನು ಸಮಗ್ರವಾಗಿ ಪರಿಶೀಲಿಸಿ ಮೂರು ತಿಂಗಳೊಳಗಾಗಿ ವರದಿಯನ್ನು ಸಲ್ಲಿಸಲಿದೆ ಎಂದು ಜಿಲ್ಲಾಧಿಕಾರಿ ಮಲೈ ಮುಹಿಲನ್ ಪತ್ರಕರ್ತರಿಗೆ ಮಾಹಿತಿ ನೀಡಿದರು. 

ಈ ಸಂದರ್ಭದಲ್ಲಿ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಮುಮತಾ ದೇವಿ, ಉ.ಕ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್  ಮೊಗೇರ್ ಸಮುದಾಯದ ಮುಖಂಡರಾದ ಮಾಜಿ ಶಾಸಕ ಮಾಂಕಾಳ್ ವೈದ್ಯ, ಎಫ್.ಕೆ.ಮೊಗೇರ್, ಮೊಗೇರ್ ಸಮಾಜದ ತಾಲೂಕು ಅಧ್ಯಕ್ಷ ಮತ್ತಿತರರು ಉಪಸ್ಥಿತರಿದ್ದರು.

ಸಮಿತಿಗೆ ವಿರೋಧ: ಮೊಗೇರ್ ಸಮುದಾಯಕ್ಕೆ ಪ.ಜಾ ಪ್ರಮಾಣ ಪತ್ರ ನೀಡುವ ಸಂಬಂಧ ಉಂಟಾಗಿರುವ ಗೊಂದಲವನ್ನು ನಿವಾರಿಸಲು ಸರ್ಕಾರ ರಚಿಸಿದ ಪರಿಶೀಲನಾ ಸಮಿತಿಗೆ ಮೊಗೇರ್ ಸಮುದಾಯದ ವಿದ್ಯಾರ್ಥಿ ನಾಯಕ ತಿಲಕ್ ಮೊಗೇರ್ ತೀವ್ರ ವ್ಯಕ್ತಪಡಿಸಿದ್ದು ಸಮಿತಿಯನ್ನು ನಾವು ಒಪ್ಪುವುದಿಲ್ಲ. ಇದರಿಂದ ನಮ್ಮ ಸಮುದಾಯ ಸಂತೃಪ್ತವಾಗಿಲ್ಲ. ನಮಗೆ ಹಲವಾರು ವರ್ಷಳಿಂದ ನೀಡುತ್ತ ಬಂದಿರುವ ಪ್ರಮಾಣ ಪತ್ರ ನಿಲ್ಲಸಿದ್ದನ್ನು ನಾವು ಪ್ರಶ್ನಿಸುತ್ತಿದ್ದೇವೆ. ನಾವು ಹೊಸದಾಗಿ ಪ.ಜಾ ಪ್ರಮಾಣ ಪತ್ರ ಬೇಕು ಎಂಬ ಬೇಡಿಕೆ ಇಡುತ್ತಿಲ್ಲ. ಭಟ್ಕಳದಲ್ಲಿ 2ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣಾಧಿಕಾರಿ ಮತ್ತು ಸಹಾಯಕ ಆಯುಕ್ತರಿಗೆ ಮನವಿ ನೀಡಿದ್ದೇವೆ. ಈಗ ಮುಂದೆ ಜಿಲ್ಲಾಧಿಕಾರಿ ಕಚೇರಿಗೆ ಕಾಲ್ನಡಿಗೆ ಜಾಥಾ ನಡೆಸಿ ನಮ್ಮ ಬೇಡಿಕೆಗಾಗಿ ಸರ್ಕಾರವನ್ನು ಒತ್ತಾಯಿಸಲಿದ್ದೇವೆ ಎಂದು ಹೇಳಿದರು.

ಯುವ ಮುಖಂಡ ಗಣೇಶ ಮೊಗೇರ್ ಮಾತನಾಡಿ, ನಾವು ನ್ಯಾಯಸಮ್ಮತ ಸಾಂವಿಧಾನಕ ರೀತಿಯಲ್ಲಿ ನಮ್ಮ ಬೇಡಿಕೆಯನ್ನು ಇಟ್ಟಿದ್ದೇವೆ. ನಮ್ಮ ಮೇಲೆ ಯಾವುದೇ ಕ್ರಮಕೈಗೊಂಡರೂ ನಾವು ಅನುಭವಿಸಲು ಸಿದ್ದರಿದ್ದೇವೆ. ಮುಂದಿನ ದಿನಗಳಲ್ಲಿ ಕಾಲ್ನಡಿಗೆ ಜಾಥಾ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದು ಆಗ ಜಿಲ್ಲಾಡಳಿತ ನಮಗೆ ಜೈಲಿಗೆ ಹಾಕಿದರೂ ನಾವು ಅನುಭವಿಸಲು ಸಿದ್ದ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News