ವಯನಾಡ್:‌ ರಾಹುಲ್‌ ಗಾಂಧಿ ಕಚೇರಿಯನ್ನು ಧ್ವಂಸಗೊಳಿಸಿದ ಎಸ್‌ಎಫ್‌ಐ ಕಾರ್ಯಕರ್ತರು; ಆರೋಪ

Update: 2022-06-24 14:38 GMT
Photo: Twitter video screengrab

ವಯನಾಡ್:‌ ಇಲ್ಲಿನ ಸಂಸದರಾಗಿರುವ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿಯವರ ಕಚೇರಿಯನ್ನು ಕೆಲ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾಗಿ ANI ವರದಿ ಮಾಡಿದೆ. ಆರೋಪಿಗಳು ಎಸ್‌ಎಫ್‌ಐ (ಸ್ಟೂಡೆಂಟ್‌ ಫೆಡರೇಶನ್‌ ಆಫ್‌ ಇಂಡಿಯಾ)ಯ ಧ್ವಜ ಹಿಡಿದಿದ್ದರು ಮತ್ತು ಅವರು ಗೋಡೆಗಳನ್ನು ದಾಟಿ ಕಚೇರಿ ಧ್ವಂಸ ಮಾಡಿದರು ಎಂದು ಭಾರತೀಯ ಯೂತ್‌ ಕಾಂಗ್ರೆಸ್‌ ತನ್ನ ಟ್ವೀಟ್‌ ನಲ್ಲಿ ಆರೋಪಿಸಿದೆ.

"ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಎಸ್‌ಎಫ್‌ಐ ಕಾರ್ಯಕರ್ತರು ಮತ್ತು ಮುಖಂಡರ ಗುಂಪು ವಯನಾಡ್ ಸಂಸದ ರಾಹುಲ್ ಗಾಂಧಿ ಅವರ ಕಚೇರಿಗೆ ಬಲವಂತವಾಗಿ ನುಗ್ಗಿದ್ದು, ಕಚೇರಿಯಲ್ಲಿದ್ದವರ ಹಾಗೂ ರಾಹುಲ್ ಗಾಂಧಿ ಅವರ ಸಿಬ್ಬಂದಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಕಾರಣವೇನೆಂದು ಗೊತ್ತಿಲ್ಲ. ಬಫರ್ ಝೋನ್ ವಿಚಾರವಾಗಿ ಆಂದೋಲನ ನಡೆಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ರಾಹುಲ್ ಗಾಂಧಿಯವರ ಪಾತ್ರವೇನು ಎಂಬುದು ಗೊತ್ತಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಆ ವಿಷಯದಲ್ಲಿ ಏನಾದರೂ ಮಾಡಲು ಸಾಧ್ಯವಾದರೆ, ಅದನ್ನು ಕೇರಳ ಸಿಎಂ ಮಾಡಬಹುದು ಅಷ್ಟೇ" ಎಂದು ಕಾಂಗ್ರೆಸ್‌ ಮುಖಂಡ ಕೆ.ಸಿ ವೇಣುಗೋಪಾಲ್‌ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News