×
Ad

ಅಖಿಲ ಭಾರತ ನಯರ ಡೀಲರ್ಸ್ ಸಂಘದಿಂದ ಕೇಂದ್ರ ಇಂಧನ ಸಚಿವರಿಗೆ ಮನವಿ

Update: 2022-06-24 18:56 IST

ಹೊಸದಿಲ್ಲಿ : ಅಖಿಲ ಭಾರತ ನಯರ ಹಿತರಕ್ಷಣಾ ಸಂಘ ಹಾಗೂ ಕರ್ನಾಟಕ ಪೆಟ್ರೋಲ್ ಡೀಲರ್ಸ್ ವೆಲ್ಫೇರ್ ಅಸೋಸಿಯೇಶನ್‌ನ ನಿಯೋಗವು ಕೇಂದ್ರ ಇಂಧನ ಸಚಿವ ಹರದೀಪ್ ಸಿಂಗ್ ಪುರಿ ಅವರನ್ನು ಇತ್ತೀಚೆಗೆ ಭೇಟಿ ನೀಡಿ ಭಾರತದ ನಯರ/ಎಸ್ಸಾರ್ ಪೆಟ್ರೋಲ್ ಬಂಕ್ ಮಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.

ದೇಶದೆಲ್ಲೆಡೆ ಇರುವ ಪೆಟ್ರೋಲ್ ಬಂಕ್‌ಗಳಿಗೆ ನಯರ ಕಂಪನಿಯು ಇಂಧನ ಪೂರ್ಣಪ್ರಮಾಣದಲ್ಲಿ ಪೂರೈಸದಿರು ವುದರಿಂದ ಸರಬರಾಜಿನ ವ್ಯತ್ಯಯದಿಂದಾಗಿ ಎಲ್ಲ ಔಟ್‌ಲೆಟ್‌ಗಳಲ್ಲೂ ನೋ ಸ್ಟಾಕ್ ಬೋರ್ಡ್ ಹಾಕುವಂತಾಗಿದೆ. ಅಲ್ಲದೆ ಸರಕಾರಿ ಸ್ವಾಮ್ಯದ ಪೆಟ್ರೋಲ್/ಡೀಸೆಲ್ ಬೆಲೆ ೫ ರೂ. ಹೆಚ್ಚಿದೆ. ಅಲ್ಲದೆ ಪ್ರತಿ ಪೆಟ್ರೋಲ್ ಬಂಕ್‌ನಲ್ಲಿ ೨ ಸಾವಿರ ಇಂಧನ ಸ್ಟಾಕ್ ಇಡಲೇಬೇಕೆಂಬ ನಿಯಮ ವಿಧಿಸಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದರೆ ದೇಶಾದ್ಯಂತ 6500 ಪೆಟ್ರೋಲ್ ಬಂಕ್ ಮಾಲಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಅಲ್ಲದೆ ಪೆಟ್ರೋಲ್ ಬಂಕ್‌ಗಳನ್ನು ನಂಬಿಕೊಂಡಿರುವ ಲಕ್ಷಾಂತರ ಸಿಬ್ಬಂದಿ ಮತ್ತವರ ಕುಟುಂಬವು ಬೀದಿ ಪಾಲಾಗುವ ಅಪಾಯವಿದೆ ಎಂದು ಸಂಘದ ಪದಾಧಿಕಾರಿಗಳು ವಿವರಿಸಿದರು.

ಕರ್ನಾಟಕ ಪೆಟ್ರೋಲ್ ಡೀಲರ್ಸ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಕೊಟ್ರೇಶ್ ನಾಯಕ್, ಕೇಂದ್ರ ಸಂಘದ ಅಧ್ಯಕ್ಷ ರಾಜವೀರ್ ಚವಾಣ್, ರಾಮಸಿಂಗ್, ರೋಹಿತ್ ಜಾಮಟಾನಿ, ರಾಜ್ಯ ಸಂಘದ ಉಪಾಧ್ಯಕ್ಷ ಚಂದ್ರಶೇಖರ ಪಾಟೀಲ್, ಕಾರ್ಯದರ್ಶಿ ಜಾಹೀರ್ ಶಾ ಮಾಣಿಪ್ಪಾಡಿ, ಖಚಾಂಚಿ ಸುನಿಲ್ ಮಾರ್ಕುಂಬಿ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News