ಶಿಂಧೆ ಪುತ್ರ ಸಂಸದನಾಗಿದ್ದರೂ, ನನ್ನ ಪುತ್ರನನ್ನು ‘ಟಾರ್ಗೆಟ್’ ಮಾಡಲಾಗುತ್ತಿದೆ: ಉದ್ಧವ್ ವಿಷಾದ

Update: 2022-06-24 14:48 GMT

ಮುಂಬೈ,ಜೂ.24: ತನ್ನ ಸಂಪುಟದ ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡಾಯವೆದ್ದಿರುವ ಶಿವಸೇನಾದ 30ಕ್ಕೂ ಅಧಿಕ ಶಾಸಕರು ಪಕ್ಷವನ್ನು ಒಡೆಯಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದರು. ಏಕನಾಥ ಶಿಂಧೆ ಅವರ ಪುತ್ರ ಲೋಕಸಭಾ ಸದಸ್ಯನಾಗಿದ್ದರೂ, ನನ್ನ ಪುತ್ರನನ್ನು ಬಗ್ಗೆ ಇಲ್ಲಸಲ್ಲದ ಟೀಕೆಗಳನ್ನು ಮಾಡಲಾಗುತ್ತಿದೆ ಎಂದವರು ನೋವು ಕ್ತಪಡಿಸಿದರು.
 
ಆದಾಗ್ಯೂ, ತನ್ನಿಂದ ದೂರಸರಿದಿರುವ ಶಾಸಕರಿಗೆ ಕೆಟ್ಟದ್ದನ್ನು ಬಯಸುವುದಿಲ್ಲವೆಂದು ಅವರು ಹೇಳಿದ್ದಾರೆ.

ಕೋವಿಡ್ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಪಕ್ಷದ ನಾಯಕರ ತಂಡವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು , ಶಿವಸೇನೆಯನ್ನು ತೊರೆಯುವ ಬದಲು ಸಾಯಲು ಸಿದ್ಧ ಎಂದವರು ಈಗ ಸುಮ್ಮನೆ ಓಡಿ ಹೋಗಿದ್ದಾರೆಂದು ವ್ಯಂಗ್ಯವಾಡಿದರು.

‘‘ನೀವು ಮರದ ಹೂಗಳು, ಹಣ್ಣು ಹಾಗೂ ಕಾಂಡಗಳನ್ನು ಕೊಂಡೊಯ್ಯಬಹುದು ಅದರೆ ಅದರ ಬೇರುಗಳನ್ನು ನಾಶಪಡಿಸಲು ಸಾಧ್ಯವಿಲ್ಲ’’ ಎಂದವರು ಮಾರ್ಮಿಕವಾಗಿ ಹೇಳಿದರು. ‘‘ಏಕನಾಥ್ ಶಿಂಧೆಗೆ ನಾನು ಎಲ್ಲವನ್ನೂ ಮಾಡಿದ್ದೇನೆ. ನನ್ನ ಬಳಿಯಿದ್ದ ಇಲಾಖೆಯನ್ನು ಅವರಿಗೆ ನೀಡಿದ್ದೆ. ಅವರ ಪುತ್ರ ಸಂಸದನಾಗಿದ್ದಾರೆ.ಆದಾಗ್ಯೂ ನನ್ನ ಪುತ್ರನ ಬಗ್ಗೆ ಟೀಕೆಗಳನ್ನು ಮಾಡಲಾಗುತ್ತಿದೆ. ನನ್ನ ವಿರುದ್ಧವೂ ಸಾಕಷ್ಟು ಆರೋಪಗಳನ್ನು ಹೊರಿಸಲಾಗುತ್ತಿದೆ ಎಂದವರು ಹೇಳಿದ್ದರು.

  ತನಗೆ ಕೊರೋನ ಸೋಂಕು ತಗಲಿರುವುದನ್ನು ಪ್ರಸ್ತಾವಿಸಿದ ಅವರು ತಲೆ, ಕುತ್ತಿಗೆಯಿಂದ ಹಿಡಿದು ಕಾಲಿನವರೆಗೂ ನನ್ನ ದೇಹವು ನೋಯುತ್ತಿದೆ. ಆದರೆ ನನ್ನ ಕಣ್ಣುಗಳು ತೆರೆಯುತ್ತಿಲ್ಲ. ಆದರೆ ನಾನು ನನ್ನ ಬಗ್ಗೆ ತೆರೆಯುತ್ತಿಲ್ಲ. ಆದರೆ, ನಾನು ನನ್ನ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ನಾನು ಅಧಿಕಾರದ ಆಟದಲ್ಲಿಲ್ಲ ಎಂದು ಉದ್ಧವ್ ಹೇಳಿದರು.

 ತನ್ನ ವಿರುದ್ಧ ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನಾ ಶಾಸಕರು ಬುಧವಾರ ಬಂಡಾಯ ಸಾರಿದ ಬಳಿಕ ಉದ್ದವ್ ಠಾಕ್ರೆ ಮಾಡಿದ ಎರಡನೆ ಭಾಷಣ ಇದಾಗಿದೆ. ಬುಧವಾರ ಮಾಡಿದ ಭಾಷಣದಲ್ಲಿ ಅವರು ಒಬ್ಬನೇ ಒಬ್ಬ ಶಾಸಕ ತನ್ನ ಎದುರಿಗೆ ಬಂದು ರಾಜೀನಾಮೆ ನೀಡುವಂತೆ ಹೇಳಿದಲ್ಲಿ ತಾನು ರಾಜೀನಾಮೆಗೆ ಸಿದ್ಧನಿದ್ದೇನೆಂದು ಹೇಳಿದ್ದರು. ಮುಖ್ಯಮಂತ್ರಿಯ ಅಧಿಕೃತ ನಿವಾಸವನ್ನು ಕೂಡಾ ಅವರು ತೊರೆದಿದ್ದರು. ‘‘ನಾನು ಅಧಿಕೃತ ನಿವಾಸವಾದ ವರ್ಷಾ ಬಂಗಲೆಯನ್ನು ತೊರೆದಿದ್ದೇನೆ. ಆದರೆ ಹೋರಾಟದ ಇಚ್ಛಾಶಕ್ತಿಯನ್ನು ಕಳೆದುಕೊಂಡಿಲ್ಲವೆಂದು ಅವರು ಹೇಳಿದರು.
ಆದಾಗ್ಯೂ ಉದ್ಧವ್ ಪಾಳಯವನ್ನು ತೊರೆಯುತ್ತಿರುವ ಶಿವಸೇನಾ ಶಾಸಕರು ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಬಂಡುಕೋರರ ಜೊತೆ ಕೈಜೋಡಿಸಲು ಅವರು ಅಸ್ಸಾಂಗೆ ತೆರಳುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News