ಅಲಿಗಢ ಮುಸ್ಲಿಂ ವಿ.ವಿ. ವಿದ್ಯಾರ್ಥಿಗಳಿಗೆ ಹಲ್ಲೆ: ಇಬ್ಬರು ರೈಲ್ವೇ ಪೊಲೀಸರ ಅಮಾನತು

Update: 2022-06-24 16:48 GMT

ಹೊಸದಿಲ್ಲಿ, ಜೂ. 24:  ಪರಿಚಯಸ್ಥರನ್ನು ಭೇಟಿಯಾಗಲು ಜೂನ್ 22ರಂದು ಅಲಿಗಢ ರೈಲು ನಿಲ್ದಾಣಕ್ಕೆ ತೆರಳಿದ ಸಂದರ್ಭ ಪ್ಲಾಟ್‌ಫಾರ್ಮ್ ಟಿಕೆಟ್  ಇಲ್ಲದೆ ಇದ್ದುದರಿಂದ ಪೊಲೀಸರು ನಮಗೆ ಕ್ರೂರವಾಗಿ ಥಳಿಸಿದ್ದಾರೆ ಎಂದು ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಇಬ್ಬರು ವಿದ್ಯಾರ್ಥಿಗಳು ಹಾಗೂ ಓರ್ವ ಮಾಜಿ ವಿದ್ಯಾರ್ಥಿ ಆರೋಪಿಸಿದ ಬಳಿಕ ಇಬ್ಬರು ರೈಲ್ವೆ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. 

ಪೊಲೀಸರ ಥಳಿತದಿಂದ ಮೂವರು  ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಪಿಎಚ್‌ಡಿ ವಿದ್ಯಾರ್ಥಿ ಮುಮಿನ್ ಅಲಿ ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಮೂವರ ವಿದ್ಯಾರ್ಥಿಗಳ ಶರೀರದಲ್ಲಿ ಬಾಸುಂಡೆ ಕಂಡು ಬಂದಿದೆ. 
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಂತ್ರಸ್ತ ವಿದ್ಯಾರ್ಥಿ ಶಾಹಿದುಲ್, ತಾವು ಮುಸ್ಲಿಮರಾಗಿದ್ದುದರಿಂದ ಈ ರೀತಿ ನಡೆಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.  

ಮೂವರು ಸಂತ್ರಸ್ತರಲ್ಲಿ ಶಾಹಿದುಲ್ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಅಬ್ಲುಲ್ಲಾ  ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದು, ಈಗ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದಾರೆ.  ಸಾದಿಕ್ ಪಿಎಚ್‌ಡಿ ಪಡೆಯಲು ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಮೂವರು ಬೆಂಗಾಳದ ಮಾಲ್ಡಾ ಜಿಲ್ಲೆಯವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News