ಜೂ.26ರಂದು ಮೂಳೂರು ಮರ್ಕಝ್ ನಲ್ಲಿ ಮಹಿಳಾ ಕಾಲೇಜು ಕಟ್ಟಡ ಉದ್ಘಾಟನೆ‌, ಸನದು ದಾನ ಸಮ್ಮೇಳನ

Update: 2022-06-24 17:01 GMT

ಮೂಳೂರು: ಅಲ್ ಇಹ್ಸಾನ್ ಮಹಿಳಾ ಕಾಲೇಜ್ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಅದರ ಉದ್ಘಾಟನೆಯು ಜೂ.26ರಂದು ಮೂಳೂರು ಅಲ್ ಇಹ್ಸಾನ್ ಶಾಲಾ ಕ್ಯಾಂಪಸ್ಸಿನಲ್ಲಿ ನಡೆಯಲಿದೆ.

ಸಂಸ್ಥೆಯ ಗೌರವ ಅಧ್ಯಕ್ಷ ಅಸ್ಸಯ್ಯಿದ್ ಕೆ ಎಸ್ ಆಟಕೋಯ ತಂಙಳ್ ಹಾಗೂ ಶಿಕ್ಷಣ ಸಚಿವರ ಸಹಿತ  ಹಲವಾರು ಗಣ್ಯರ ಉಪಸ್ಥಿತಿಯಲ್ಲಿ ಬೆಳಗ್ಗೆ 10 ಗಂಟೆಗೆ ಮಹಿಳಾ ಕಾಲೇಜು ಕಟ್ಟಡ ಉದ್ಘಾಟನೆಯೊಂದಿಗೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಸಂಜೆ 3 ಗಂಟೆಗೆ ಮಹಿಳಾ ಶರೀಅತ್ ಕಾಲೇಜು ವಿದ್ಯಾರ್ಥಿನಿಯರಿಗೆ ಮತ್ತು ಸಂಜೆ 4.30ಕ್ಕೆ ಝಹರತುಲ್ ಕುರ್‍ಆನ್ ಕೋರ್ಸ್ ಪೂರ್ಣಗೊಳಿಸಿದ ಹಾಗೂ ಕುರ್‍ಆನ್ ಹಿಫ್ಳ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಸನದುದಾನ ಸಮಾರಂಭಗಳು ನಡೆಯಲಿದೆ.

ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್, ಸಚಿವರಾದ ಕೋಟ ಶೀನಿವಾಸ ಪೂಜಾರಿ, ಅಂಗಾರ, ಶಾಸಕರಾದ ಲಾಲಾಜಿ ಆರ್ ಮೆಂಡನ್, ಯು ಟಿ ಖಾದರ್, ಬಿ ಎಂ ಪಾರೂಕ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮೊಯ್ದಿನ್ ಬಾವಾ, ವಕ್ಫ್ ಬೋರ್ಡ್ ಅಧ್ಯಕ್ಷ‌ ಶಾಫಿ ಸಅದಿ, ಉದ್ಯಮಿಗಳಾದ ಹಿದಾಯತುಲ್ಲಾ ಅಬ್ಬಾಸ್, ಅಕ್ರಮ್ ಮಹ್ಮೂದ್ ಶೇಕ್, ಮುಹಮ್ಮದ್ ಹಾರಿಸ್, ಹಾಜಿ ಝಕರಿಯಾ ಜೋಕಟ್ಟೆ, ಅಶ್ಪಾಕ್ ಕರ್ನಿರೆ, ಒಇಇಈ ಅಧ್ಯಕ್ಷರಾದ ಹಾಜಿ ಮೂಸಬ್ಬ, ಶರೀಫ್ ತೀರ್ಥಹಳ್ಳಿ, ಮುಮ್ತಾಝ್ ಅಲಿ, ಶ್ರೀ ದೇವಿ ಪ್ರಸಾದ್ ಶೆಟ್ಟಿ, ಯೋಗೀಶ್ ವಿ ಶೆಟ್ಟಿ ಕಾಪು, ಶ್ರೀ ಸುದಾಮಾ ಶೆಟ್ಟಿ ಹಾಗೂ ಶ್ರೀ ವೆಂಕಟೇಶ್ ನಾವಾಡ ಮುಂತಾದ ಹಲವಾರು ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಅಸ್ಸಯ್ಯಿದ್ ಕೆ ಎಸ್ ಆಟಕೋಯ ತಂಙಳ್‍  ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News