ಏಕನಾಥ್ ಶಿಂಧೆ ಬಣ ಮಂಡಿಸಿದ ಅವಿಶ್ವಾಸ ನಿರ್ಣಯ ತಿರಸ್ಕರಿಸಿದ ಮಹಾರಾಷ್ಟ್ರ ವಿಧಾನಸಭೆ ಉಪ ಸ್ಪೀಕರ್

Update: 2022-06-25 09:46 GMT
ನರಹರಿ ಸೀತಾರಾಮ್ ಝಿರ್ವಾಲ್, Photo: twitter

ಮುಂಬೈ: ಏಕನಾಥ್ ಶಿಂಧೆ ಬಣ ತನ್ನ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಮಹಾರಾಷ್ಟ್ರ ವಿಧಾನಸಭೆ ಉಪ ಸ್ಪೀಕರ್ ನರಹರಿ ಸೀತಾರಾಮ್ ಝಿರ್ವಾಲ್ ತಿರಸ್ಕರಿಸಿದ್ದಾರೆ. ಈ ಮೂಲಕ ಬಂಡಾಯ ಶಾಸಕರಿಗೆ ಭಾರೀ ಹಿನ್ನಡೆಯಾಗಿದೆ ಎಂದು NDTV ವರದಿ ಮಾಡಿದೆ.

 33 ಬಂಡಾಯ ಶಾಸಕರು ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿದ್ದರೂ  ಯಾವುದೇ ಶಾಸಕರು ಅದನ್ನು ಉಪ ಸ್ಪೀಕರ್ ಕಚೇರಿಗೆ ಸಲ್ಲಿಸಲಿಲ್ಲ, ಬದಲಿಗೆ ಅನಾಮಧೇಯ ಇ-ಮೇಲ್ ಐಡಿ ಮೂಲಕ ಅದನ್ನು ಕಳುಹಿಸುವ ಮಾರ್ಗ ಆಯ್ದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿವಸೇನೆಯ ಲೆಟರ್‌ಹೆಡ್‌ನಲ್ಲಿ ಕಳುಹಿಸಿರುವುದು  ಪ್ರಸ್ತಾವನೆ  ತಿರಸ್ಕರಿಸಲು ಇನ್ನೊಂದು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಧಾನಸಭೆ ದಾಖಲೆಗಳ ಪ್ರಕಾರ  ಈಗ ಶಿವಸೇನೆ ಶಾಸಕಾಂಗ ಪಕ್ಷದ ನಾಯಕ ಅಜಯ್ ಚೌಧರಿ ಆಗಿದ್ದು,  ಏಕನಾಥ್ ಶಿಂಧೆ ಅಲ್ಲ ಎಂದು ಮೂಲಗಳು ತಿಳಿಸಿವೆ.

ಉದ್ಧವ್ ಠಾಕ್ರೆ ತಂಡ ಸಲ್ಲಿಸಿರುವ  ಅನರ್ಹತೆ ಅರ್ಜಿಯ ಕುರಿತು ಉಪಸಭಾಪತಿ 16 ಬಂಡಾಯ ಶಾಸಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಬಂಡಾಯ ಶಾಸಕರು ಅನರ್ಹತೆ ಅರ್ಜಿಗೆ ಪ್ರತಿಕ್ರಿಯಿಸಲು ಸೋಮವಾರ ಖುದ್ದಾಗಿ ಅಥವಾ ಅವರ ವಕೀಲರ ಮೂಲಕ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News