ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ರನ್ನು ಭೇಟಿಯಾದ ಏಕನಾಥ ಶಿಂಧೆ: ವರದಿ

Update: 2022-06-25 15:14 GMT

ಗುವಾಹಟಿ: ಶಿವಸೇನೆಯ ಬಂಡಾಯ ಶಾಸಕ ಏಕನಾಥ್ ಶಿಂಧೆ ಮತ್ತು ಬಿಜೆಪಿಯ ದೇವೇಂದ್ರ ಫಡ್ನವೀಸ್ ನಿನ್ನೆ ರಾತ್ರಿ ಗುಜರಾತ್‌ನ ವಡೋದರಾದಲ್ಲಿ ಭೇಟಿಯಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಸಾಧ್ಯತೆಯ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿದ್ದಾಗಿ ndtv.com ವರದಿ ಮಾಡಿದೆ.

ಗೃಹ ಸಚಿವ ಅಮಿತ್ ಶಾ ಕೂಡ ನಿನ್ನೆ ರಾತ್ರಿ ವಡೋದರಾದಲ್ಲಿದ್ದರು ಎಂದು ನೇರವಾಗಿ ಈ ಬಗ್ಗೆ ತಿಳಿದ ಜನರು ಹೇಳಿದ್ದಾರೆ. ಶಿಂಧೆ ನಿನ್ನೆ ರಾತ್ರಿ ಅಸ್ಸಾಂನ ಗುವಾಹಟಿಯಿಂದ ವಿಶೇಷ ವಿಮಾನದಲ್ಲಿ ವಡೋದರಾಗೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

2019 ರಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಅಧಿಕಾರ ವಹಿಸಿಕೊಳ್ಳುವವರೆಗೂ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಫಡ್ನವೀಸ್ ಅವರೊಂದಿಗಿನ ಮಾತುಕತೆಯ ನಂತರ, ಶಿಂಧೆ ಬಿಜೆಪಿ ಆಡಳಿತದ ಅಸ್ಸಾಂನ ಮುಖ್ಯ ನಗರಕ್ಕೆ ಮರಳಿದ್ದು, ಅಲ್ಲಿ ಸುಮಾರು 40 ಬಂಡಾಯ ಸೇನಾ ಶಾಸಕರು ಪಂಚತಾರಾ ಹೋಟೆಲ್‌ನಲ್ಲಿ ಬೀಡುಬಿಟ್ಟಿದ್ದಾರೆ.

ಅವರಲ್ಲಿ, ಏಕನಾಥ ಶಿಂಧೆ ಸೇರಿದಂತೆ 16 ಶಾಸಕರನ್ನು ಬಂಡಾಯದ ರೂವಾರಿ ಎಂದು 
ಠಾಕ್ರೆ ಸೂಚಿಸಿದ್ದಾರೆ. ಸದ್ಯ ಅವರು ಮಹಾರಾಷ್ಟ್ರ ಡೆಪ್ಯೂಟಿ ಸ್ಪೀಕರ್‌ ರಿಂದ ಅನರ್ಹತೆ ನೋಟಿಸ್ ಅನ್ನು ಎದುರಿಸಿದ್ದು,  ಸೋಮವಾರ ಸಂಜೆಯೊಳಗೆ ಪ್ರತಿಕ್ರಿಯಿಸಲು ಮತ್ತು ಮುಂಬೈನಲ್ಲಿ ಹಾಜರಾಗುವಂತೆ ಕೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News