ದೇಶದಲ್ಲಿ 196.64 ಕೋಟಿ ದಾಟಿದ ಕೋವಿಡ್ ಲಸಿಕೀಕರಣ

Update: 2022-06-25 15:16 GMT

ಹೊಸದಿಲ್ಲಿ, ಜೂ.25: ಭಾರತದ ಕೋವಿಡ್19 ಲಸಿಕೀಕರಣವು ಶನಿವಾರ 196.94 ಕೋಟಿಯ ಗಡಿಯನ್ನು ದಾಟಿದೆಯೆಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. 12-14 ವಯೋಮಾನದವರಿಗಾಗಿನ ಕೋವಿಡ್ ಲಸಿಕೀಕರಣವನ್ನು 2022ರ ಮಾರ್ಚ್ 16ರಂದು ಆರಂಭಿಸಲಾಗಿತ್ತು.  

ಈವರೆಗೆ 3,62, 20,781 ವಯಸ್ಕರಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ಹಾಗೂ 2,23,36,175 ಮಂದಿಗೆ ಕೋವಿಡ್ ಲಸಿಕೆಯ ಎರಡನೆ ಡೋಸ್ ನೀಡಲಾಗಿದೆ.
 
15-18 ವರ್ಷದ ವಯೋಗುಂಪಿನವರಲ್ಲಿ 6,02,72,529 ಮಂದಿಗೆ ಮೊದಲ ಡೋಸ್ ಹಾಗೂ 4,82,78,560 ಮಂದಿಗೆ ಎರಡನೆ ಡೋಸ್ ನೀಡಲಾಗಿದೆ. ಆರೋಗ್ಯಪಾಲನೆ ಕಾರ್ಯಕರ್ತರ ಪೈಕಿ ಈವರೆಗೆ 1,04,08,528 ಮಂದಿ ಮೊದಲ ಡೋಸ್ ಹಾಗೂ 1,00,60,891 ಮಂದಿ ಎರಡನೆ ಡೋಸ್ ಪಡೆದುಕೊಂಡಿದ್ದಾರೆ ಮತ್ತು 56,11,589 ಮಂದಿಗೆ ಮುನ್ನೆಚ್ಚರಿಕಾ ಡೋಸ್ ನೀಡಲಾಗಿದೆ. ಅದೇ ರೀತಿ ಮುಂಚೂಣಿ ಕಾರ್ಯಕರ್ತರಲ್ಲಿ 1,84,22,906 ಮಂದಿ ಮೊದಲ ಡೋಸ್ ಪಡೆದಿದ್ದಾರೆ. 1,76,19,383 ಮಂದಿಗೆ ಲಸಿಕೆಯ ಎರಡನೆ ಡೋಸ್ ನೀಡಲಾಗಿದೆ. ಅಲ್ಲದೆ 99,49,140 ಮಂದಿ ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲಾಗಿದೆ.

ಅಂತೆಯೇ, 45-59 ವರ್ಷಗಳ ವಯೋಗುಂಪಿನವರಲ್ಲಿ 20,34,14,801 ಮಂದಿ ಮೊದಲ ಡೋಸ್ ಹಾಗೂ 19,30,99,269 ಮಂದಿ ಎರಡನೆ ಡೋಸ್ ಪಡೆದಿದ್ದಾರೆ ಮತ್ತು 22,93,180 ಮಂದಿಗೆ ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ 12,72,28,781 ಮಂದಿಗೆ ಮೊದಲ ಡೋಸ್, 12,05,89141 ಮಂದಿಗೆ ಎರಡನೆ ಹಾಗೂ 2,33,65,301 ಮಂದಿಗೆ ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲಾಗಿದೆ.

ಈ ಮಧ್ಯೆ ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 15,940 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 20 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಕ್ಕೆ ಸಂಖ್ಯೆ 91,779ಕ್ಕೇರಿದೆ ಹಾಗೂ ಪ್ರಸಕ್ತ ಸೋಂಕಿನ ದೈನಂದಿನ ಪಾಸಿಟಿವಿಟಿ ದರ 4.39 ಶೇ. ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News