ಮಂಗಳೂರು: 1.28 ಕೋ. ರೂ. ಮೌಲ್ಯದ ಮಾದಕ ವಸ್ತುಗಳ ವಿಲೇವಾರಿ

Update: 2022-06-26 06:50 GMT

ಮಂಗಳೂರು, ಜೂ.26: ಅಂತರ್‌ರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಅಕ್ರಮ ಕಳ್ಳ ಸಾಗಣೆ ವಿರೋಧಿ ದಿನವಾದ ಇಂದು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡ ಒಟ್ಟು 1.28 ಕೋ. ರೂ. ಮೌಲ್ಯದ ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲಾಯಿತು.

ಮುಲ್ಕಿಯ ರಾಮ್ಕಿ ಎನರ್ಜಿ ಆ್ಯಂಡ್ ಎನ್ವಯರ್ನ್‌ಮೆಂಟ್ ಲಿ.ನಲ್ಲಿ ಡಿಸಿಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಕಮಿಷನರೇಟ್ ವ್ಯಾಪ್ತಿಯ 15 ಪೊಲೀಸ್ ಠಾಣೆಗಳ 97 ಪ್ರಕರಣಗಳಿಗೆ ಸಂಬಂಧಿಸಿದ ಮಾದಕ ವಸ್ತುಗಳನ್ನು ಇಂದು ಬೆಳಗ್ಗೆ ವಿಲೇವಾರಿ ಮಾಡಲಾಯಿತು.

1,16,17,200 ರೂ. ಮೌಲ್ಯದ 580.860 ಕೆಜಿ ಗಾಂಜಾ, 1,37,500 ರೂ. ಮೌಲ್ಯದ 25 ಗ್ರಾಂ ಹೆರಾಯಿನ್, 11,20,000 ರೂ. ಮೌಲ್ಯದ 320 ಗ್ರಾಂ ಎಂಡಿಎಂಎ ಮಾದಕ ವಸ್ತು ಸೇರಿದಂತೆ ಒಟ್ಟು 1,28,74,700 ರೂ. ಮೌಲ್ಯದ ಮಾದಕ ವಸ್ತುಗಳನ್ನು ಈ ಸಂದರ್ಭದಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News