ಕೀವ್ ಪ್ರದೇಶದಲ್ಲಿ ಸರಣಿ ಸ್ಫೋಟ

Update: 2022-06-26 16:35 GMT

ಕೀವ್, ಜೂ.26: ಉಕ್ರೇನ್ ರಾಜಧಾನಿ ಕೀವ್‌ನ ಶೆವ್ಚೆಂಕಿವಿಸ್ಕಿಯ್ ಜಿಲ್ಲೆಯಲ್ಲಿ ರವಿವಾರ ಬೆಳಿಗ್ಗೆ ಸರಣಿ ಸ್ಫೋಟ ಸಂಭವಿಸಿದ್ದು ಕುಸಿದುಬಿದ್ದ ಕಟ್ಟಡದ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ ಎಂದು ನಗರದ ಮೇಯರ್ ವಿಟಾಲಿ ಕಿಲ್‌ಶ್ಕೊ ಹೇಳಿದ್ದಾರೆ. 

ರಶ್ಯ ಸೇನೆಯ ದಾಳಿಯಿಂದ ಸ್ಫೋಟ ಸಂಭವಿಸಿದೆ. ಸ್ಫೋಟದಿಂದ ವ್ಯಾಪಕ ಹಾನಿಯಾಗಿದ್ದು 9 ಮಹಡಿಯ ಜನವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಭಾಗಶಃ ಹಾನಿಗೊಳಗಾಗಿರುವ ಕಟ್ಟಡದಲ್ಲಿದ್ದ ನಿವಾಸಿಗಳನ್ನು ತೆರವುಗೊಳಿಸಲಾಗಿದೆ. ಮತ್ತೂ ಎರಡು ಕಟ್ಟಡಗಳಿಗೆ ಹಾನಿಯಾಗಿದ್ದು ಕಟ್ಟಡದ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ . ಗಾಯಗೊಂಡರವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದವರು ಹೇಳಿದ್ದಾರೆ. ಕೀವ್ ಪ್ರದೇಶದ ಪ್ರಮುಖ ಜಿಲ್ಲೆಯಾಗಿರುವ ಶೆವ್ಚೆಂಕಿವಿಸ್ಕಿಯ್‌ನಲ್ಲಿ ವಿವಿಗಳು, ರೆಸ್ಟಾರೆಂಟ್‌ಗಳು, ಆರ್ಟ್ ಗ್ಯಾಲರಿಗಳಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News