ಕೋವಿಡ್‌ ಲಸಿಕೆ ವಿರುದ್ಧದ ನಿಲುವು ಸಡಿಲಿಸದ ಜೊಕೊವಿಕ್:‌ ಯುಎಸ್‌ ಓಪನ್‌ ನಿಂದ ಹೊರಗುಳಿಯುವ ಸಾಧ್ಯತೆ

Update: 2022-06-27 15:15 GMT
Photo: Twitter/Raxiren

ಲಂಡನ್:‌ ಯುಎಸ್ ಓಪನ್‌ನಿಂದ ಹೊರಗುಳಿಯಬೇಕಾಗಿ ಬಂದರೂ ಕೋವಿಡ್ -19 ಲಸಿಕೆ ತೆಗೆದುಕೊಳ್ಳದಿರುವ ತಮ್ಮ ನಿಲುವನ್ನು ನೊವಾಕ್ ಜೊಕೊವಿಕ್ ಅವರು ಪುನರುಚ್ಚರಿಸಿದ್ದಾರೆ. ವಿಂಬಲ್ಡನ್ 2022 ಅಭಿಯಾನದ ಹಿನ್ನೆಲೆಯಲ್ಲಿ ಮಾತನಾಡಿದ ಅವರು ಸಂಭಾವ್ಯ ಯುಎಸ್ ಓಪನ್ ನಿಷೇಧದ ಬಗ್ಗೆ ಹೆಚ್ಚಿನದನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ indiatoday.in ವರದಿ ಮಾಡಿದೆ.

ಯುನೈಟೆಡ್ ಸ್ಟೇಟ್ಸ್ ಸರ್ಕಾರವು ದೇಶಕ್ಕೆ ಪ್ರವೇಶಿಸಲು ವ್ಯಾಕ್ಸಿನೇಷನ್ ಅನ್ನು ಕಡ್ಡಾಯಗೊಳಿಸಿರುವ ಕಾರಣ, ಮುಂದಿನ ವರ್ಷ ಫ್ರೆಂಚ್ ಓಪನ್ ನಡೆಯುವರೆಗೆ ಸದ್ಯ ನಡೆಯುತ್ತಿರುವ ʼವಿಂಬಲ್ಡನ್ʼ ಜೊಕೊವಿಕ್ ಅವರಿಗೆ ಕೊನೆಯ ಗ್ರ್ಯಾಂಡ್ ಸ್ಲಾಮ್ ಪಂದ್ಯವಾಗಿರಬಹುದಾದ ಸಾಧ್ಯತೆ ಇದೆ. ಈ ವರ್ಷದ ಆರಂಭದಲ್ಲಿ ಜೊಕೊವಿಕ್ ಅವರು ಕೋವಿಡ್ ಲಸಿಕೆ ಹಾಕದ ಕಾರಣ ಆಸ್ಟ್ರೇಲಿಯಾದಿಂದ ಗಡೀಪಾರು ಮಾಡಲಾಗಿತ್ತು.

ಸಂಭಾವ್ಯ ಯುಎಸ್ ಓಪನ್ ನಿಷೇಧವು ಸೋಮವಾರದಿಂದ ಪ್ರಾರಂಭವಾಗುವ ವಿಂಬಲ್ಡನ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಹೆಚ್ಚಿನ ಪ್ರೇರಣೆ ನೀಡುತ್ತಿದೆ ಎಂದು ಜೊಕೊವಿಕ್ ಹೇಳಿದ್ದಾರೆ.  

"ಇಂದಿನಿಂದ, ಈ ಪರಿಸ್ಥಿತಿಗಳಲ್ಲಿ (ಯುನೈಟೆಡ್) ಸ್ಟೇಟ್ಸ್‌ಗೆ ಪ್ರವೇಶಿಸಲು ನನಗೆ ಅನುಮತಿ ಇಲ್ಲ. ಹೌದು, ಖಂಡಿತವಾಗಿ, ನನಗೆ ಅದರ ಅರಿವಿದೆ. ಅದು ಇಲ್ಲಿ (ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ) ಉತ್ತಮ ಪ್ರದರ್ಶನ ನೀಡಲು ಹೆಚ್ಚುವರಿ ಪ್ರೇರಣೆಯಾಗಿದೆ. ಆಶಾದಾಯಕವಾಗಿ, ನಾನು ನಾನು ಕಳೆದ ಮೂರು ಆವೃತ್ತಿಗಳಲ್ಲಿ ಮಾಡಿದಂತೆ ಉತ್ತಮ ಪ್ರದರ್ಶನವನ್ನು ನೀಡಬಹುದು, ”ಎಂದು ಜೊಕೊವಿಕ್ ಲಂಡನ್‌ನಲ್ಲಿ ಹೇಳಿದ್ದಾರೆ.

 ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಬರುತ್ತಿರುವ ಒತ್ತಡವನ್ನು ವಿರೋಧಿಸುವ ಜೊಕೋವಿಕ್‌, ಬಲವಂತವಾಗಿ ಲಸಿಕೆ ಹಾಕಕಿಸಿಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದರು. ಇದಕ್ಕಾಗಿ ಮುಂದೆ ಟೆನಿಸ್ ಟೂರ್ನಿಗಳಿಂದ ದೂರ ಉಳಿಯಲು ಸಿದ್ಧ ಎಂದು‌ ಅವರು ಈ ಹಿಂದೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News