ಆಸ್ಟ್ರೇಲಿಯಾ: ದ್ವೇಷಪೂರಿತ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳದ ಟ್ವಿಟರ್ ವಿರುದ್ಧ ಮುಸ್ಲಿಮರ ಆರೋಪ

Update: 2022-06-27 17:08 GMT

ಸಿಡ್ನಿ, ಜೂ.27: ದ್ವೇಷ ಪ್ರಚೋದಿಸುವ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲು ಟ್ವಿಟರ್ ವಿಫಲವಾಗಿದೆ ಎಂದು ಆಸ್ಟ್ರೇಲಿಯಾದಲ್ಲಿ ವಾಸಿಸುವ ಮುಸ್ಲಿಮ್ ಸಮುದಾಯದವರು ಆರೋಪಿಸಿದ್ದಾರೆ.

2011ರಲ್ಲಿ ಉಗ್ರಗಾಮಿಯೊಬ್ಬ 77 ಮಂದಿಯನ್ನು ಹತ್ಯೆಗೈದ ಪ್ರಕರಣವನ್ನು ಉಲ್ಲೇಖಿಸಿ ಮುಸ್ಲಿಮರ ವಿರುದ್ಧ ಹಾಗೂ ಕುರಾನ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಟ್ವಿಟರ್ ವೇದಿಕೆಯಲ್ಲಿ ಪೋಸ್ಟ್ ಮಾಡಲಾಗಿದೆ. 

ಕಟ್ಟಾ ಬಲಪಂಥೀಯರ ಖಾತೆಯಿಂದ ಪೋಸ್ಟ್ ಮಾಡಲಾಗಿರುವ ಈ ಹೇಳಿಕೆಯ ದ್ವೇಷ ಪ್ರಚೋದಿಸುವ ವಿಷಯವನ್ನು ಪರಿಶೀಲಿಸದೆ ಪ್ರಕಟಿಸಿರುವ ಉದ್ಯೋಗಿ ಇದಕ್ಕೆ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮುಸ್ಲಿಂ ಸಮುದಾಯ, ಈ ಬಗ್ಗೆ ಕ್ರಮ ಕೈಗೊಳ್ಳಲು ಹಲವು ಬಾರಿ ಮನವಿ ಮಾಡಿಕೊಂಡರೂ ಟ್ವಿಟರ್ ಕ್ರಮ ಕೈಗೊಂಡಿಲ್ಲ ಎಂದು ಕ್ವೀನ್ಸ್ಲ್ಯಾಂಡ್ ಮಾನವ ಹಕ್ಕುಗಳ ಆಯೋಗದಲ್ಲಿ ದೂರು ದಾಖಲಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News