ಶೀಘ್ರವೇ ಮುಂಬೈಗೆ ತೆರಳುತ್ತೇವೆ: ಬಂಡಾಯ ಶಾಸಕ ಏಕನಾಥ್ ಶಿಂಧೆ ಘೋಷಣೆ

Update: 2022-06-28 08:46 GMT
Photo: PTI

ಗುವಾಹಟಿ: ಶೀಘ್ರವೇ ಮುಂಬೈಗೆ ಹೋಗಿ ಬಾಳಾಸಾಹೇಬ್ ಠಾಕ್ರೆ ಅವರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವುದಾಗಿ ಶಿವಸೇನೆ  ಬಂಡಾಯ ನಾಯಕ  ಏಕನಾಥ್ ಶಿಂಧೆ ಇಂದು ಘೋಷಿಸಿದರು.

ತಾವು ಹಾಗೂ  ಇತರ ಬಂಡುಕೋರರು ಒಂದು ವಾರದಿಂದ ತಂಗಿರುವ ಗುವಾಹಟಿಯ ಹೋಟೆಲ್‌ನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಶಿಂಧೆ ಈ ಘೋಷಣೆ ಮಾಡಿದರು.

"ಗುವಾಹಟಿಯಲ್ಲಿ ನನ್ನೊಂದಿಗೆ 50 ಜನರಿದ್ದಾರೆ.  ಅವರು ತಮ್ಮ ಸ್ವಂತ ಇಚ್ಛೆಯಿಂದ ಹಾಗೂ  ಹಿಂದುತ್ವಕ್ಕಾಗಿ ಬಂದಿದ್ದಾರೆ. ನಾವೆಲ್ಲರೂ ಶೀಘ್ರದಲ್ಲೇ ಮುಂಬೈಗೆ ಹೋಗುತ್ತೇವೆ" ಎಂದು ಶಿಂಧೆ ಸುದ್ದಿಗಾರರಿಗೆ ತಿಳಿಸಿದರು.

ಶಿಂಧೆ ಅವರು ಅಧಿಕಾರದ ಹಕ್ಕು ಸಾಧಿಸಲು  ಮುಂಬೈ ಅಥವಾ ದಿಲ್ಲಿಗೆ ತೆರಳಬಹುದು . ಅವರು ಕಳೆದ ವಾರ ಗುಜರಾತ್‌ನಲ್ಲಿ ಬಿಜೆಪಿಯ ಉನ್ನತ ನಾಯಕರನ್ನು ಭೇಟಿಯಾಗಿದ್ದರು.

ನಿನ್ನೆ ಬಂಡುಕೋರರನ್ನು ಅನರ್ಹಗೊಳಿಸುವ ನೋಟಿಸ್‌ಗೆ ಪ್ರತಿಕ್ರಿಯಿಸಲು ಸುಪ್ರೀಂಕೋರ್ಟ್  ಜುಲೈ 12 ರವರೆಗೆ ಕಾಲಾವಕಾಶ ನೀಡಿತ್ತು.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಯ ಸಾಧ್ಯತೆಯನ್ನು ಚರ್ಚಿಸಲು  ವಕೀಲರೊಂದಿಗೆ ಶಿಂಧೆ  ಸಮಾಲೋಚಿಸಿದ್ದಾರೆ  ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News