ಉಕ್ರೇನ್ ನಲ್ಲಿ ಶಾಪಿಂಗ್‌ ಮಾಲ್ ಮೇಲೆ ರಶ್ಯ ಕ್ಷಿಪಣಿ ದಾಳಿ: ಕನಿಷ್ಠ 16 ಮಂದಿ ಸಾವು, 59ಕ್ಕೂ ಅಧಿಕ ಮಂದಿಗೆ ಗಾಯ

Update: 2022-06-28 17:33 GMT
Photo: PTI

ಕೀವ್,ಜೂ.28: ಉಕ್ರೇನ್ನ ಕ್ರೆಮೆನ್ಚುಕ್ ನಗರದಲ್ಲಿರುವ ಜನದಟ್ಟಣೆಯ ಶಾಪ್ಪಿಂಗ್ ಮಾಲ್ ಮೇಲೆ ರಶ್ಯದ ಎರಡು ಕ್ಷಿಪಣಿಗಳು ಅಪ್ಪಳಿಸಿದ್ದು, 16ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ 59ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೋಮವಾರ ತಿಳಿಸಿದ್ದಾರೆ.

ರಶ್ಯದ ಅವಳಿ ಕ್ಷಿಪಣಿ ದಾಳಿ ನಡೆದ ಸಂದರ್ಭದಲ್ಲಿ ಶಾಪ್ಪಿಂಗ್ ಮಳಿಗೆಯಲ್ಲಿ 1 ಸಾವಿರಕ್ಕೂ ಅಧಿಕ ಜನರಿದ್ದರೆಂದು ಝೆಲೆನ್ಸ್ಕಿ ತಿಳಿಸಿದ್ದಾರೆ . ‘‘ರಶ್ಯದಿಂದ ಸಭ್ಯತೆ ಹಾಗೂ ಮಾನವತೆಯ ಬಗ್ಗೆ ಆಶಾವಾದವನ್ನು ಇಟ್ಟುಕೊಳ್ಳುವುದು ನಿಷ್ಪ್ರಯೋಜಕವಾಗಿದೆ. ನಾಗರಿಕರ ವಿರುದ್ಧ ನಡೆದ ಭಯೋತ್ಪಾದಕ ಕೃತ್ಯ ಇದಾಗಿದೆ ’’ ಝೆಲೆನ್ಸ್ಕಿ ಟೆಲಿಗ್ರಾಂ ಸಾಮಾಜಿಕಜಾಲತಾಣದಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 ಈ ಮಧ್ಯೆ ಲುಗಾನ್ಸ್ಕ್ ಪ್ರಾಂತದ ಗವರ್ನರ್ ಸೆರ್ಗಿಯಿ ಗೈದಾಯ್ ಅವರು ಲಿಸಿಚಾನ್ಸ್ಕ್ ನಗರದಲ್ಲಿ ಮಂಗಳವಾರ ರಶ್ಯ ದಾಳಿಯಿಂದ ಎಂಟು ನಾಗರಿಕರು ಮೃತಪಟ್ಟಿದ್ದಾರೆಂದು ತಿಳಿಸಿದೆ. ಕುಡಿಯುವ ನೀರು ಸಂಗ್ರಹಿಸುವುದಕ್ಕಾಗಿ ಜಮಾಯಿಸಿದ್ದ ಜನರ ಮೇಲೆ ರಶ್ಯ ಸೇನೆಯ, ರಾಕೆಟ್ ಲಾಂಚರ್ಗಳ ಮೂಲಕ ದಾಳಿ ನಡೆಸಿವೆಯೆಂದು ಗವರ್ನರ್ ತಿಳಿಸಿದ್ದಾರೆ. ಘಟನೆಯಲ್ಲಿ 21 ಮಂದಿ ಗಾಯಗೊಂಡಿದ್ದಾರೆಂದು ಅವರು ಹೇಳಿದ್ದಾರೆ.
ರಶ್ಯ ಸೇನೆಯು ಇತ್ತೀಚಿನ ದಿನಗಳಲ್ಲಿ ಡೊನ್ಬಾಸ್ ನಗರದ ಮೇಲಿನ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದು, ಲಿಸಿನ್ಚಾಸ್ಕ್ ನಗರವು ಅದರ ಮುಂದಿನ ಗುರಿಯಾಗಿದೆಯೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News